ಬಿಜೆಪಿಯ ಸುಳ್ಳಿನ ಪ್ರಣಾಳಿಕೆಯನ್ನು ಗುಜರಿ ವ್ಯಾಪಾರಿಗಳೂ ಖರೀದಿಸುವುದಿಲ್ಲ: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು: '2018ರ ಪ್ರಣಾಳಿಕೆಯಲ್ಲಿ "ಸ್ತ್ರೀ ಉನ್ನತಿ ನಿಧಿ" ಎಂಬ ಘೋಷಣೆಯ ನೆನಪಿದೆಯೇ ? ನೆನಪಿಲ್ಲ ಎಂದರೆ ಹಿಂದಿನ ಪ್ರಣಾಳಿಕೆಯನ್ನು ತೆರೆದು ನೋಡಲಿ' ಎಂದು ಬಿಜೆಪಿ ವಿರುದ್ಧ ವಿಪಕ್ಷ ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿ ಮೊದಲು ತಮ್ಮ ಹಿಂದಿನ ಪ್ರಣಾಳಿಕೆಯ ರಿಪೋರ್ಟ್ ಕಾರ್ಡ್ ನೀಡಿ ಹೊಸ ಭರವಸೆಗಳ ಬಗ್ಗೆ ಮಾತಾಡಲಿ. ಬಿಜೆಪಿಯ ಸುಳ್ಳಿನ ಪ್ರಣಾಳಿಕೆಯನ್ನು ಗುಜರಿ ವ್ಯಾಪಾರಿಗಳೂ ಖರೀದಿಸುವುದಿಲ್ಲ' ಎಂದು ವ್ಯಂಗ್ಯವಾಡಿದೆ.
''ವಸತಿ ರಹಿತರಿಗೆ 10 ಲಕ್ಷ ಮನೆ ಎನ್ನುವುದು ಬಿಜೆಪಿಯ ಮತ್ತೊಂದು ಕಿವಿ ಮೇಲೆ ಇಡಲು ತಯಾರಾದ ಪ್ಲಾಸ್ಟಿಕ್ ಹೂವು! ಹಿಂದಿನ ಪ್ರಣಾಳಿಕೆಯಲ್ಲೂ ಇದನ್ನೇ ಹೇಳಿದ್ದರು, ಈಗಲೂ ಇದನ್ನೇ ಹೇಳಿದ್ದಾರೆ. ಆದರೆ 4 ವರ್ಷದ ಅಧಿಕಾರದಲ್ಲಿ ಕೊನೆ ಪಕ್ಷ 4 ಮನೆಗಳನ್ನೂ ಮಂಜೂರು ಮಾಡಲಿಲ್ಲ. ವಸತಿ ಯೋಜನೆಗೆ ಕೇಂದ್ರದ ಅನುದಾನವನ್ನೂ ತರಲಿಲ್ಲ'' ಎಂದು ಆರೋಪಿಸಿದೆ.
2018ರ ಪ್ರಣಾಳಿಕೆಯಲ್ಲಿ "ಸ್ತ್ರೀ ಉನ್ನತಿ ನಿಧಿ" ಎಂಬ ಘೋಷಣೆಯ ನೆನಪಿದೆಯೇ @BJP4Karnataka?
— Karnataka Congress (@INCKarnataka) May 1, 2023
ನೆನಪಿಲ್ಲ ಎಂದರೆ ಹಿಂದಿನ ಪ್ರಣಾಳಿಕೆಯನ್ನು ತೆರೆದು ನೋಡಿ.
ಬಿಜೆಪಿ ಮೊದಲು ತಮ್ಮ ಹಿಂದಿನ ಪ್ರಣಾಳಿಕೆಯ ರಿಪೋರ್ಟ್ ಕಾರ್ಡ್ ನೀಡಿ ಹೊಸ ಭರವಸೆಗಳ ಬಗ್ಗೆ ಮಾತಾಡಲಿ.
ಬಿಜೆಪಿಯ ಸುಳ್ಳಿನ ಪ್ರಣಾಳಿಕೆಯನ್ನು ಗುಜರಿ ವ್ಯಾಪಾರಿಗಳೂ ಖರೀದಿಸುವುದಿಲ್ಲ!