ಶಿವಮೊಗ್ಗ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ

Update: 2023-05-01 16:42 GMT

ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಮೊಗ್ಗದಲ್ಲಿ ಸೋಮವಾರ ರೋಡ್ ಶೋ ನಡೆಸಿದರು.

ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್ ಚನ್ನಬಸಪ್ಪ ಪರ ರೋಡ್ ಶೋ ನಡೆಸಿದರು.

ನಗರದ  ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಪ್ರಾರಂಭವಾದ ರೋಡ್ ಶೋ ಗಾಂಧಿ ಬಝಾರ್ ಮೂಲಕ ಶಿವಪ್ಪ ನಾಯಕ ವೃತ್ತ,ಅಮಿರ್ ಅಹಮ್ಮದ್ ವೃತ್ತ, ಗೋಪಿ ಸರ್ಕಲ್ ,ದುರ್ಗಿಗುಡಿ  ಮೂಲಕ ಜೈಲ್ ಸರ್ಕಲ್ ನಲ್ಲಿ ಹಾದು ಲಕ್ಷ್ಮೀ ಟಾಕೀಸ್ ನಲ್ಲಿ ಸಮಾಪ್ತಿಗೊಂಡಿತ್ತು.ಸಾವಿರಾರು ಜನ ರೋಡ್ ಶೋ ನಲ್ಲಿ ಹೆಜ್ಜೆಹಾಕಿದರು.

ರೋಡ್ ಶೋ ನಲ್ಲಿ ಅಮಿತ್ ಶಾ ಜೊತೆ ಬಿಜೆಪಿ ಅಭ್ಯರ್ಥಿ ಎಸ್ ಎನ್ ಚನ್ನಬಸಪ್ಪ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಭಾಗಿಯಾಗಿದ್ದರು.

Similar News