ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಯುಪಿ ಮಾದರಿಯಲ್ಲಿ ಎನ್‌ಕೌಂಟರ್ ನಿಶ್ಚಿತ: ಶಾಸಕ ಯತ್ನಾಳ್
Update: 2023-05-01 23:37 IST
ಧಾರವಾಡ : 'ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮಾದರಿಯನ್ನು ಜಾರಿ ಮಾಡುತ್ತೇವೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಯತ್ನಾಳ್ ಹೇಳಿದ್ದಾರೆ.
ಸೋಮವಾರ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಹಿರೇಹರಕುಣಿಯಲ್ಲಿ ಮಾತನಾಡಿದ ಅವರು, 'ಹಿಂದೂ ಮತ್ತು ದೇಶದ ವಿರುದ್ಧ ಯಾರಾದರು ಮಾತಾಡಿದರೆ ಎನ್‌ಕೌಂಟರ್ ಮಾಡುತ್ತೇವೆ' ಎಂದು ಹೇಳಿದರು.
'ಉತ್ತರ ಪ್ರದೇಶದಲ್ಲಿ ಅಣ್ಣತಮ್ಮಂದಿರ ಎನ್ಕೌಂಟರ್ ಆಯ್ತು. ಹೀಗಾಗಿ ಕೆಲವರು ಜೈಲಿನಿಂದ ಹೊರಬರಲು ಹೆದರುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ವಾಹನಗಳು ಪಲ್ಟಿಯಾಗುತ್ತಲೇ ಇರುತ್ತದೆ. ಹಾದಿಬೀದಿಯಲ್ಲಿ ರೌಡಿಗಳ ಹೆಣಗಳು ಉರುಳುತ್ತಲೇ ಇರುತ್ತದೆ. ಕರ್ನಾಟಕದಲ್ಲಿ ಯಾರಾದರು ಹಾರಾಡಿದರೆ ಎನ್ಕೌಂಟರ್ ಖಚಿತ' ಎಂದರು.
ಇದನ್ನೂ ಓದಿ: ಬಿಎಸ್ ವೈ ಸಭೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಲಿಂಗಾಯತ ಮುಖಂಡರ ಮತ್ತೊಂದು ಸಭೆ: ಶೆಟ್ಟರ್ ಗೆ ಬೆಂಬಲ ಘೋಷಣೆ