×
Ad

ಮಂಡ್ಯ: ದಲಿತರನ್ನು ಊರಿಂದ ಹೊರಗೆ ಕಳುಹಿಸಲು ಪಕ್ಷೇತರ ಅಭ್ಯರ್ಥಿಗೆ ಬೇಡಿಕೆ ಇಟ್ಟ ಗ್ರಾಮಸ್ಥರು!

ವೀಡಿಯೊ ವೈರಲ್

Update: 2023-05-02 22:33 IST

ಮಂಡ್ಯ, ಮೇ 2: ತಮ್ಮ ಗ್ರಾಮದ ಮಧ್ಯದಲ್ಲಿರುವ ದಲಿತರನ್ನು ಬೇರೆ ಜಾಗಕ್ಕೆ ಕಳುಹಿಸಿಕೊಡಿ ಎಂದು ಕೆ.ಆರ್.ಪೇಟೆ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಮತಯಾಚನೆಗೆ ಬಂದ ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಗ್ರಾಮದ ಕೆಲವರು ಬೇಡಿಕೆ ಇಟ್ಟ ಪ್ರಕರಣ ನಡೆದಿದೆ.

ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯೂಟ್ಯೂಬರ್ ಚಂದನ್‍ಗೌಡ ಎಂಬುವರು ಆ ಗ್ರಾಮದಲ್ಲಿ ಮತಯಾಚನೆ ಮಾಡುವ ವೇಳೆ ಈ ಘಟನೆ ನಡೆದಿದ್ದು, ವಿಡೀಯೋ ವೈರಲ್ ಆಗಿದೆ.

ಗ್ರಾಮಸ್ಥರ ಬೇಡಿಕೆಗೆ ಬೇಸರ ವ್ಯಕ್ತಪಡಿಸಿದ ಚಂದನ್‍ಗೌಡ, ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಹಿಂಗೆಲ್ಲ ಮಾತಾಡಬಾರದು. ಹೀಗೇ ಮಾತನಾಡಿದರೆ ನಿಮ್ಮ ಮೇಲೆ ಕೇಸ್ ಹಾಕ್ತಾರೆ. ನನಗೆ ನಿಮ್ಮ ಮತ ಬೇಕಿಲ್ಲ. ಬೇಕಾದರೆ ನಿಮ್ಮ ಎಂಪಿ, ಶಾಸಕರ ಬಳಿ ಕೇಳಿ ನಿಮ್ಮ ಬೇಡಿಕೆ ಈಡೇರಿಸಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವು ಗ್ರಾಮಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಈ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲವೆಂದು ತಿಳಿದು ಬಂದಿದೆ.

Similar News