ಸೊರಬ: ಭೀಕರ ರಸ್ತೆ ಅಪಘಾತದಲ್ಲಿ ಸಹೋದರರಿಬ್ಬರು ಸ್ಥಳದಲ್ಲೇ ಮೃತ್ಯು
Update: 2023-05-03 13:55 IST
ಸೊರಬ, ಮೇ 3: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೊರಬ ತಾಲೂಕಿನ ಉಳವಿ ಸಮೀಪ ಬುಧವಾರ ವರದಿಯಾಗಿದೆ.
ಸಾಗರದ ರಾಮನಗರ ನಿವಾಸಿಗಳಾದ ವೆಲ್ಡಿಂಗ್ ಕೆಲಸಗಾರ ಸುಹೇಲ್(27), ಸಯ್ಯದ್ ಆಫ್ರಿದ್ (21) ಮೃತರು ಎಂದು ಗುರುತಿಸಲಾಗಿದೆ.
ಮೃತರಿಬ್ಬರೂ ಸಹೋದರರಾಗಿದ್ದು, ಮದುವೆಗೆಂದು ಉಳವಿ ಕಡೆಗೆ ಹೋಗುತ್ತಿದ್ದಾಗ 12:45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮೃತದೇಹಗಳನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.