ಕಲಬುರಗಿ: ನಿನ್ನೆ ಮೋದಿ, ಇಂದು ಪ್ರಿಯಾಂಕಾ ಗಾಂಧಿ ರೋಡ್ ಶೋ
Update: 2023-05-03 20:36 IST
ಕಲಬುರಗಿ: ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಿಯಾಂಕಾ ಗಾಂಧಿ ನಗರದ ಗಂಜ್ ಪ್ರದೇಶದಿಂದ ಜಗತ್ ವೃತ್ತದ ವರೆಗೆ ಬುಧವಾರ ಬೃಹತ್ ರೋಶ್ ಶೋ ನಡೆಸಿದರು.
ರೋಡ್ ಶೋ ನಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನೀಜ್ ಫಾತೀಮಾ, ಚಿತ್ತಾಪುರ ಕ್ಷೇತ್ರದ ಪ್ರಿಯಾಂಕ್ ಖರ್ಗೆ, ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್, ಡಾ. ಅಜಯಸಿಂಗ್ ಪರ ಪ್ರಚಾರ ನಡೆಸಿ ಮತಯಾಚಿಸಿದರು.
ರೋಡ್ ಶೋ ನಲ್ಲಿ ಲಂಬಾಣಿ ಲಾವಣಿ ನೃತ್ಯ ಜನರ ಗಮನ ಸೆಳೆಯಿತು. ರೋಡ್ ಶೋ ಕಲ್ಯಾಣ ಕರ್ನಾಟಕ ಜಾತ್ರೆಯಂತೆ ಮೆರಗು ತಂದಿತ್ತು. ರೋಡ್ ಶೋನಲ್ಲಿ ಬೃಹತ್ ಪ್ರಮಾಣದಲ್ಲಿ ಮಹಿಳೆಯರು ಪ್ರಿಯಾಂಕಾ ಗಾಂಧಿಯನ್ನು ನೋಡಲು ಮುಗಿಬಿದ್ದರು.
ನಿನ್ನೆ ( ಮಂಗಳವಾರ) ಪ್ರಧಾನಿ ಮೋದಿ ಅವರು ಹುಮನಾಬಾದ್ ರಿಂಗ್ ರಸ್ತೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್(ಎಸ್‌ವಿಪಿ) ವೃತ್ತದ ವರೆಗೆ ರೋಡ್ ಶೋ ನಡೆಸಿದ್ದರು.