×
Ad

ವರುಣಾದಲ್ಲಿ ಸಿದ್ದರಾಮಯ್ಯ ಪರ ನಟ ಶಿವರಾಜ್ ಕುಮಾರ್ ರೋಡ್ ಶೋ

Update: 2023-05-04 17:38 IST

ಮೈಸೂರು, ಮೇ 4: ನಟ ಶಿವರಾಜ್ ಕುಮಾರ್ ಇಂದು ವಿಧಾನಸಭಾ ವಿಪಕ್ಷ ನಾಯಕ, ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯು ಪರವಾಗಿ ರೋಡ್ ಶೋ ನಡೆಸಿದರು.

ಕ್ಷೇತ್ರದ ರಾಂಪುರ, ಮರಳೂರು, ಗೊದ್ವನಪುರ, ತಾಂಡವಪುರದಲ್ಲಿ ರೋಡ್ ಶೋ ನಡೆಸಿದ ಶಿವರಾಜ್ ಕುಮಾರ್ ಸಿದ್ದರಾಮಯ್ಯ ಪರವಾಗಿ ಮತ ಯಾಚಿಸಿದರು. 

ಈ ಸಂದರ್ಭದಲ್ಲಿ ನಟಿ ನಿಶ್ವಿಕಾ ನಾಯ್ಡು, ಶಾಸಕ ಡಾ.ಯತೀಂದ್ರ, ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್, ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಸೇರಿದಂತೆ ಅನೇಕರು ಸಾಥ್ ನೀಡಿದರು. 

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, " ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಇಂದು ವರುಣಾಕ್ಕೆ ಬಂದು ರೋಡ್ ಶೋ ನಡೆಸಿ ನನ್ನ ಪರವಾಗಿ ಮತ ಕೇಳಿದ್ದು ನನಗೆ ಇನ್ನಷ್ಟು ಬಲ ತಂದಿದೆ. ಶಿವಣ್ಣ ಅವರ ಆಗಮನದಿಂದ ಡಾ.ರಾಜಕುಮಾರ್ ಅವರೇ ಬಂದು ನನಗೆ ಹರಸಿದಂತಾಯಿತು. ರಾಜ್ ಕುಟುಂಬಕ್ಕೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ. 

Similar News