ಪ್ರಧಾನಿ ಮೋದಿ ಕರ್ನಾಟಕದ ದೇವರುಗಳನ್ನು ಅವಮಾನಿಸಿದ್ದಾರೆ: ಕಾಂಗ್ರೆಸ್ ಆರೋಪ
ಬೆಂಗಳೂರು: ಮೋದಿಗೆ ಧರ್ಮ, ದೇವರು ಎಂದರೆ ಭಕ್ತಿಯಲ್ಲ, ಪ್ರಚಾರಕ್ಕೆ ಬಳಸುವ ಕುಯುಕ್ತಿ ಅಷ್ಟೇ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಪ್ರಧಾನಿ ಮೋದಿ ಅವರಿಗೆ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ್ ಗಣೇಶನ ಮೂರ್ತಿ ಉಡುಗೊರೆಯಾಗಿ ಕೊಡಲು ಬಂದಾಗ ಅವರನ್ನು ವೇದಿಕೆಯಿಂದ ಪಕ್ಕಕ್ಕೆ ಸರಿಸುತ್ತಿದ್ದಾರೆನ್ನಲಾದ ವಿಡಿಯೋ ಒಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ಪ್ರಧಾನಿ ಮೋದಿ ಅವರು ಕರ್ನಾಟಕದ ದೇವರುಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ.
ಕರ್ನಾಟಕದ ಪ್ರಮುಖ ಆರಾಧ್ಯ ದೈವ ಆನೆಗುಡ್ಡೆ ಗಣಪತಿ ಮೂರ್ತಿಯನ್ನು ಪಡೆಯಲು ನಿರಾಕರಿಸಿದ ಮೋದಿ ಕರ್ನಾಟಕದ ದೇವರುಗಳನ್ನು ಹಾಗೂ ಕರ್ನಾಟಕವನ್ನು ಅವಮಾನಿಸಿದ್ದಾರೆ ಎಂದು ಹೇಳಿರುವ ಕಾಂಗ್ರೆಸ್, ಮೋದಿಯವರು ಗಣಪತಿ ಮೂರ್ತಿ ಕಂಡೊಡನೆ ಅಸಹನೆ ವ್ಯಕ್ತಪಡಿಸಿ ಪಕ್ಕಕ್ಕೆ ಇಡುವಂತೆ ಸೂಚಿಸಿ ದೇವರ ಮುಂದೆಯೇ ದರ್ಪ ಮೆರೆದಿದ್ದಾರೆ ಎಂದು ಟ್ವೀಟ್ ಮಾಡಿದೆ.
ಮೋದಿಗೆ ಧರ್ಮ, ದೇವರು ಎಂದರೆ ಭಕ್ತಿಯಲ್ಲ, ಪ್ರಚಾರಕ್ಕೆ ಬಳಸುವ ಕುಯುಕ್ತಿ ಅಷ್ಟೇ!
— Karnataka Congress (@INCKarnataka) May 4, 2023
ಕರ್ನಾಟಕದ ಪ್ರಮುಖ ಆರಾಧ್ಯ ದೈವ ಆನೆಗುಡ್ಡೆ ಗಣಪತಿ ಮೂರ್ತಿಯನ್ನು ಪಡೆಯಲು ನಿರಾಕರಿಸಿದ ಮೋದಿ ಕರ್ನಾಟಕದ ದೇವರುಗಳನ್ನು ಹಾಗೂ ಕರ್ನಾಟಕವನ್ನು ಅವಮಾನಿಸಿದ್ದಾರೆ.
ಮೋದಿಯವರು ಗಣಪತಿ ಮೂರ್ತಿ ಕಂಡೊಡನೆ ಅಸಹನೆ ವ್ಯಕ್ತಪಡಿಸಿ ಪಕ್ಕಕ್ಕೆ ಇಡುವಂತೆ ಸೂಚಿಸಿ ದೇವರ… pic.twitter.com/M2p7KR2kNA