ನಟ ಸುದೀಪ್ ಅಭಿಮಾನಿಗಳಿಗೆ ಲಾಠಿ ಏಟು
Update: 2023-05-04 19:27 IST
ರಾಯಚೂರು, ಮೇ 4: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಪ್ರಚಾರವನ್ನು ನಟ ಕಿಚ್ಚ ಸುದೀಪ್ ಮುಂದುವರೆಸಿದ್ದು, ಈ ನಡುವೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಹೆಲಿಪ್ಯಾಡ್‍ಗೆ ನುಗ್ಗಿದಾಗ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.
ಗುರುವಾರ ಇಲ್ಲಿನ ರಾಯಚೂರು ಜಿಲ್ಲೆಯ 4 ಕ್ಷೇತ್ರಗಳಾದ ದೇವದುರ್ಗ, ಲಿಂಗಸುಗೂರು, ಮಾನ್ವಿ, ಮಸ್ಕಿ ಕ್ಷೇತ್ರಗಳಲ್ಲಿ ರೋಡ್‍ಶೋ ನಡೆಸಿದರು.
ಆರಂಭದಲ್ಲಿ ದೇವದುರ್ಗಕ್ಕೆ ನಟ ಸುದೀಪ್ ಆಗಮಿಸುತ್ತಿದ್ದಂತೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಹೆಲಿಪ್ಯಾಡ್‍ಗೆ ನುಗ್ಗಿದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.