×
Ad

ಮಣಿಕಂಠಗೆ BJP ಟಿಕೆಟ್ ನೀಡಿದ್ದು ಖರ್ಗೆ ಕುಟುಂಬವನ್ನ ಮುಗಿಸುವುದಕ್ಕಾ?: ಕಾಂಗ್ರೆಸ್ ಆಕ್ರೋಶ

''ಈ ಷಡ್ಯಂತ್ರಗಳೆಲ್ಲಾ ನಾಗಪುರದ್ದೋ, ಅಮಿತ್ ಶಾರದ್ದೋ?'' ► ''ಖರ್ಗೆಯವರನ್ನು ಕೊಲ್ಲುವಷ್ಟು ದ್ವೇಷ ಏಕೆ?''

Update: 2023-05-06 17:44 IST

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಇಡೀ ಕುಟುಂಬವನ್ನು ಹತ್ಯೆ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿರುವುದಾಗಿ ಚಿತ್ತಾಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೌಡಿಶೀಟರ್ ಹಿನ್ನೆಲೆಯ ಮಣಿಕಂಠ ರಾಠೋಡ್ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಶೇಕಡಾ 40 ಪರ್ಸೆಂಟ್ ಕಮಿಷನ್ ನ ಬಿಜೆಪಿ 40 ಕ್ರಿಮಿನಲ್ ಪ್ರಕರಣ ಇರುವ ಮಣಿಕಂಠ ರಾಥೋಡನಿಗೆ ಟಿಕೆಟ್ ನೀಡಿದ್ದೇ ಖರ್ಗೆ ಕುಟುಂಬವನ್ನು ಮುಗಿಸುವುದಕ್ಕಾ ? ಬಿಜೆಪಿಗರೇ, ದಲಿತ ನಾಯಕ ಪರಮೇಶ್ವರ್ ಮೇಲಿನ ದಾಳಿ, ದಲಿತ ನಾಯಕ ಖರ್ಗೆ ಕುಟುಂಬ ಕೊಲ್ಲಲು ಸಂಚು ಈ ಷಡ್ಯಂತ್ರಗಳೆಲ್ಲಾ ಯಾರದ್ದು ? ನಾಗಪುರದ್ದೋ, ಅಮಿತ್ ಶಾರದ್ದೋ ? ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ. 

''ವಿರೋಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಬ್ಬರನ್ನು ಕೊಲೆ ಮಾಡುವ ಸಂಚನ್ನು ಬಿಜೆಪಿಯ ಅಭ್ಯರ್ಥಿಯೇ ಮಾಡಿದ ಸಂಗತಿ ಹೊರಬಂದರೂ ಪ್ರಧಾನಿ ಮೋದಿ ಮೌನ ವಹಿಸಿರುವುದೇಕೆ? ರಕ್ಷಣೆಯ ಹೊಣೆ ಹೊತ್ತ ಗೃಹಸಚಿವ ಅಮಿತ್ ಶಾ ಮೌನವಾಗಿರುವುದೇಕೆ? ಬಿಜೆಪಿಯ ಈ ಮೌನ ಸಮ್ಮತಿಯ ಲಕ್ಷಣವೇ? ಅಥವಾ ಷಡ್ಯಂತ್ರದ ಜಾಣ ಮೌನವೇ?'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

''ಬಿಜೆಪಿಗೆ ಮಲ್ಲಿಕಾರ್ಜುನ್ ಖರ್ಗೆಯವರನ್ನು ಕೊಲ್ಲುವಷ್ಟು ದ್ವೇಷ ಏಕೆ? ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಮುನ್ನುಡಿ ಬರೆದಿದ್ದಕ್ಕಾ? ಆರ್ಟಿಕಲ್ 371ಜೆ ಜಾರಿಗೋಸ್ಕರ ಹೋರಾಡಿ ಯಶಸ್ವಿಯಾಗಿದ್ದಕ್ಕಾ? ಲಕ್ಷಾಂತರ ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಕ್ಕಾ? ಕಾರ್ಮಿಕರ ಹಕ್ಕಿಗಾಗಿ ಹೋರಾಡಿದ್ದಕ್ಕಾ?'' ದುರಾಡಳಿತವನ್ನು ಪ್ರಶ್ನಿಸಿದ್ದಕ್ಕಾ? ಎಂದು ಕಾಂಗ್ರೆಸ್ ಕಿಡಿಕಾರಿದೆ. 

Similar News