ಕಲಬುರಗಿ: ಕಾಂಗ್ರೆಸ್ ಶಾಸಕಿಯ ಆಪ್ತರಿಬ್ಬರ ಮನೆ ಮೇಲೆ ಐಟಿ ದಾಳಿ

Update: 2023-05-06 14:57 GMT

ಕಲಬುರಗಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಐಟಿ ಅಧಿಕಾರಿಗಳು ಶನಿವಾರ ಕಾಂಗ್ರೆಸ್ ಪಾಳಯದ ಇಬ್ಬರು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. 

ಕಲಬುರಗಿ ನೂರ್ ಬಾಗ್ ಪ್ರದೇಶದಲ್ಲಿರುವ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕನೀಜ್ ಫಾತಿಮಾ ಅವರ ಆಪ್ತರಿರಾಗಿರುವ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ವಾಹೀದ್ ಅಲಿ ಫಾತೇಖಾನಿ ಮತ್ತು ಮೊಹಮ್ಮದ್ ಮಸಿ ಜಾಗಿರದಾರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಇತ್ತೀಚೆಗಷ್ಟೇ ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. 

ಇದನ್ನೂ ಓದಿ: ನನ್ನನ್ನು ಸೇರಿಸಿ ಕಾಂಗ್ರೆಸ್‍ನ 50 ಅಭ್ಯರ್ಥಿಗಳ ಮೇಲೆ ಐಟಿ ದಾಳಿ ಸಂಚು: ಲಕ್ಷ್ಮಿ ಹೆಬ್ಬಾಳ್ಕರ್

Similar News