×
Ad

ವಿಧಾನಸಭಾ ಚುನಾವಣೆ: ಮೇ 10ಕ್ಕೆ ನ್ಯಾಯಾಲಯಗಳಿಗೆ ರಜೆ ಘೋಷಿಸಿದ ಹೈಕೋರ್ಟ್

Update: 2023-05-07 19:49 IST

ಬೆಂಗಳೂರು, ಮೇ 7: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ಮೇ 10ರಂದು ರಜೆ ಘೋಷಿಸಿ ಹೈಕೋರ್ಟ್ ಆದೇಶಿಸಿದೆ. 

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ರಿಜಿಸ್ಟ್ರಾರ್ ಜನರಲ್(ಉಸ್ತುವಾರಿ) ಇ.ರಾಜೀವಗೌಡ ಅವರು ಈ ಕುರಿತಂತೆ ನೋಟಿಫಿಕೇಷನ್ ಹೊರಡಿಸಿದ್ದಾರೆ. 

ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು ಹಾಗೂ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಆ ದಿನ ರಜೆ ನೀಡಲಾಗುತ್ತಿದೆ ಎಂದು ನೋಟಿಫಿಕೇಷನ್‍ನಲ್ಲಿ ತಿಳಿಸಲಾಗಿದೆ. 

Similar News