×
Ad

ರೋಡ್ ಶೋಗೆ ಜನ ಬಾರದಿರುವ ಬಗ್ಗೆ ಅಮಿತ್ ಶಾ ಮಾತನಾಡಿದ್ದರೆನ್ನಲಾದ ವಿಡಿಯೋವನ್ನು ಪೋಸ್ಟ್‌ ಮಾಡಿ ಅಳಿಸಿದ ANI !

Update: 2023-05-07 20:03 IST

ಬೆಂಗಳೂರು: ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನಡೆದ ರೋಡ್ ಶೋ ವೇಳೆ 'ಜನರೇ ಇಲ್ಲ, ಬೈಕ್ ಗಳಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

Alt News ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರು ಈ ವಿಡಿಯೋ ತುಣುಕನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಝುಬೈರ್ ಪ್ರಕಾರ, ಮೊದಲಿಗೆ ANI ಸುದ್ದಿ ಸಂಸ್ಥೆಯು ಬೆಳಗಾವಿಯಲ್ಲಿ ನಡೆದ ರೋಡ್ ಶೋ ಕುರಿತ ಟ್ವೀಟ್ ಮಾಡಲು ಈ ವಿಡಿಯೋವನ್ನು ಬಳಸಿದೆ, ನಂತರ ತನ್ನ ಖಾತೆಯಿಂದ ಆ ವಿಡಿಯೋವನ್ನು ANI ಡಿಲಿಟ್ ಮಾಡಿದೆ.

"ಬೈಕ್ ಇದೆ, ಜನರಿಲ್ಲ, ಎಲ್ಲರನ್ನು ಬೈಕ್ ನಲ್ಲಿ ಕೂರಿಸಲಾಗಿದೆ" ಎಂದು ಅಮಿತ್ ಶಾ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ANI ಮೊದಲ ಬಾರಿ ಈ ವಿಡಿಯೋ ಪೋಸ್ಟ್‌ ಮಾಡುವಾಗ ಇದರ ಉದ್ದವು 3:26 ನಿಮಿಷಗಳಿತ್ತು, ನಂತರ ಪೋಸ್ಟ್‌ ಮಾಡುವಾಗ ಕೆಲವು ಭಾಗವನ್ನು ಕತ್ತರಿಸಿದ್ದು, ವಿಡಿಯೋವನ್ನು 2:36 ನಿಮಿಷಕ್ಕೆ ಎಡಿಟ್ ಮಾಡಲಾಗಿದೆ ಎಂದು ಝುಬೈರ್ ಟ್ವೀಟ್ ಮಾಡಿದ್ದಾರೆ

ಈ ಕುರಿತ ಸ್ಕ್ರೀನ್ ರೆಕಾರ್ಡರ್ ದಾಖಲೆಗಳನ್ನು ಹಂಚಿಕೊಂಡಿರುವ ಝುಬೈರ್, ಮೊದಲ ವಿಡಿಯೋವನ್ನು ಡಿಲಿಟ್ ಮಾಡಿ ಯಾಕೆ ಸಣ್ಣ ತುಣುಕನ್ನು ಹಂಚಿದ್ದೀರಿ ಎಂದು ಎಎನ್ಐ ಅನ್ನು ಪ್ರಶ್ನಿಸಿದ್ದಾರೆ.

ಎಎನ್‌ಐಗೆ ಅದರ ಟ್ವೀಟ್‌ ಅನ್ನು ಎಡಿಟ್‌ ಮಾಡಲು ಮತ್ತು ಅಕ್ಷರ ತಪ್ಪುಗಳನ್ನು ಸರಿಪಡಿಸುವ ಅವಕಾಶವಿತ್ತು. ಅದರ ಬದಲು, ಅವರು ಆಸಕ್ತಿಕರ ಸಂಭಾಷಣೆಯಿದ್ದ ವೀಡಿಯೋದ ಭಾಗವನ್ನೇ ಅಳಿಸಿ ಮತ್ತೆ ಶೇರ್‌ ಮಾಡಿದ್ದಾರೆ ಎಂದು ಝುಬೈರ್ ಟ್ವೀಟ್ ಮಾಡಿದ್ದಾರೆ.

Similar News