5 ವರ್ಷಗಳ ಕಾನೂನು ಪದವಿ ಕೋರ್ಸ್‍ಗೆ ಅರ್ಜಿ ಆಹ್ವಾನ

Update: 2023-05-07 17:18 GMT

ಬೆಂಗಳೂರು, ಮೇ 7: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ವಿಶ್ವವಿದ್ಯಾಲಯ ಕಾನೂನು ಕಾಲೇಜು ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಐದು ವರ್ಷದ ಬಿ.ಎ., ಎಲ್‍ಎಲ್.ಬಿ. (ಹಾನರ್ಸ್ ಕೋರ್ಸ್) ಪದವಿ ಮೊದಲ ಸೆಮಿಸ್ಟರ್ ಕೋರ್ಸ್‍ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ಮೇ 26 ಕೊನೆಯ ದಿನವಾಗಿದೆ. 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ ಅಥವಾ 10+2 ತರಗತಿಯಲ್ಲಿ ಕನಿಷ್ಠ ಶೇ.45 ಅಂಕಗಳನ್ನು ಗಳಿಸಿರುವವರು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳ ವಯಸ್ಸು ಸಾಮಾನ್ಯ ವರ್ಗ 20 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಒ.ಬಿ.ಸಿ., ಮತ್ತು ವಿದೇಶಿ ಅಭ್ಯರ್ಥಿಗಳಿಗೆ 22 ವರ್ಷಗಳನ್ನು ಮೀರಿರಬಾರದು.

ಸಾಮಾನ್ಯ ವರ್ಗ ದ ಅಭ್ಯರ್ಥಿಗಳು 850 ರೂ. ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ವರ್ಗ-1ಗಳ ಅಭ್ಯರ್ಥಿಗಳಿಗೆ  550 ರೂ. ಅರ್ಜಿ ಶುಲ್ಕದ ಜೊತೆ ಆನ್‍ಲೈನ್ ಅರ್ಜಿ ಪ್ರೊಸೆಸಿಂಗ್ ಶುಲ್ಕ 40 ರೂ. ತೆರಿಗೆ ಸೇರಿ ಹಣ ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ಸಾಮಾನ್ಯ ಮತ್ತು ಪೇಮೆಂಟ್ ಸೀಟು ಎರಡಕ್ಕೂ ಅರ್ಜಿ ಸಲ್ಲಿಸಲು ಬಯಸಿದರೆ, ಅದರ ಕುರಿತಾಗಿ ಅರ್ಜಿಯ ನಮೂನೆಯಲ್ಲಿ ಸ್ಪಷ್ಟವಾಗಿ ತಿಳಿಸಬೇಕು. 

ಆಸಕ್ತಿಯುಳ್ಳ ಅಭ್ಯರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯ ವೆಬ್‍ಸೈಟ್ https://bangaloreuniversity.ac.in/ ಅಥವಾ www.ulcbangalore.com ನಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ ಸಂಬಂಧಪಟ್ಟ ಎಲ್ಲಾ ದಾಖಲೆ ಹಾಗೂ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡುವ ಮುಖಾಂತರ ಅರ್ಜಿಗಳನ್ನು ಕೊನೆಯ ದಿನಾಂಕದೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲೆ ಹೇಳಿರುವ ವಿಶ್ವವಿದ್ಯಾಲಯದ ವೆಬ್‍ಸೈಟ್ ನೋಡಬಹುದು ಅಥವಾ ದೂರವಾಣಿ ಸಂಖ್ಯೆ 080-22961172 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Similar News