×
Ad

SSLC ಫಲಿತಾಂಶ: 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಾಲ್ವರು ವಿದ್ಯಾರ್ಥಿಗಳ ವಿವರ ಇಲ್ಲಿದೆ

Update: 2023-05-08 10:59 IST

ಐಎಎಸ್ ಅಧಿಕಾರಿಯಾಗುವ ಗುರಿಬೆಂಗಳೂರು, ಮೇ 8: ಪ್ರಸಕ್ತ (2022-23) ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು,  ನಾಲ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 

ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ 7,00,619. ಅದರಲ್ಲಿ 625ಕ್ಕೆ 625 ಅಂಕ ಗಳಿಸಿ ನಾಲ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

► 625 ಅಂಕ ಗಳಿಸಿದ ವಿದ್ಯಾರ್ಥಿಗಳು ಯಾರ್ಯಾರು? 

ಭೂಮಿಕಾ ಪೈ– ನ್ಯೂ ಮೆಕಾಲೆ ಶಾಲೆ, ಹೊಸೂರು ರಸ್ತೆ, ಬೆಂಗಳೂರು

ಯಶಸ್​​ಗೌಡ– ಬಿಜಿಎಸ್​ ಶಾಲೆ, ಅಗಲಗುರ್ಕಿ, ಚಿಕ್ಕಬಳ್ಳಾಪುರ ಜಿಲ್ಲೆ

ಅನುಪಮಾ ಶ್ರೀಶೈಲ್ ಹಿರೆಹೋಳಿ– ಶ್ರೀಕುಮಾರೇಶ್ವರ ಶಾಲೆ,ಸವದತ್ತಿ

ಬೀಮನಗೌಡ ಪಾಟೀಲ್-ವಿಜಯಪುರ


ಎಸೆಸೆಲ್ಸಿ ವಿದ್ಯಾರ್ಥಿಗಳ ಅಭಿಪ್ರಾಯ..

‘ಎಸೆಸೆಲ್ಸಿ ಫಲಿತಾಂಶ ನನಗೆ ಸಾಕಷ್ಟು ಖುಷಿಯನ್ನು ತಂದಿದೆ. ನಾನು ಯಾವುದೇ ಮನೆಪಾಠ (ಟ್ಯೂಶನ್)ಕ್ಕೆ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಏಳೆಂಟು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಪೋಷಕರು, ಶಿಕ್ಷಕರ ಬೆಂಬಲ ಹಾಗೂ ಸಹಕಾರದಿಂದ ಈ ಫಲಿತಾಂಶ ಸಾಧಿಸಲು ಸಾಧ್ಯವಾಯಿತು. 

-ಭೂಮಿಕಾ ಆರ್. ಪೈ, ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ
..............

''ಐಎಎಸ್ ಅಧಿಕಾರಿಯಾಗುವ ಗುರಿ''

‘ಶೈಕ್ಷಣಿಕ ವರ್ಷದ ಆರಂಭದಿಂದಲೇ ಪರೀಕ್ಷೆಗೆ ತಯಾರಿ ನಡೆಸಿದ್ದೆ. ನಿರೀಕ್ಷೆಯಂತೆ ಮೊದಲ ಸ್ಥಾನ ಸಿಕ್ಕಿರುವುದು ಬಹಳಷ್ಟು ಖುಷಿ ತಂದಿದೆ. ಮುಂದೆ ಪಿಯುನಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದು, ಅದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತೇನೆ. ಐಎಎಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ’

-ಅನುಪಮಾ ಶ್ರೀಶೈಲ್ ಹಿರೇಹೊಳಿ, ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ

-----------------------------------

‘ಪ್ರತಿನಿತ್ಯ 10 ತಾಸು ಓದುತ್ತಿದ್ದೆ. ನಮ್ಮದು ಕೃಷಿ ಕುಟುಂಬವಾಗಿದ್ದರೂ, ತಂದೆ-ತಾಯಿ ನನಗೆ ಓದಲು ಹೆಚ್ಚು ಅವಕಾಶ ಮಾಡಿಕೊಡುತ್ತಿದ್ದರು. ಶಾಲೆಯಲ್ಲಿ ಶಿಕ್ಷಕರು ಹೆಚ್ಚುವರಿ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳು ಓದಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ. ಹೀಗೆ ಮನೆಯಲ್ಲಿ, ಶಾಲೆಯಲ್ಲಿ ಓದಲು ಒಳ್ಳೆಯ ವಾತಾವರಣವಿತ್ತು. ಪಿಯುನಲ್ಲಿ ವಿಜ್ಞಾನವನ್ನು ಓದಬೇಕು ಎಂದಿದ್ದೇನೆ. ಮುಂದೆ ವೈದ್ಯನಾಗಬೇಕು ಎಂಬ ಆಸೆ’

-ಭೀಮಾನಗೌಡ ಬಿರಾದರ್ ಪಾಟೀಲ್, ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ 

Similar News