SSLC ಫಲಿತಾಂಶ: ಉಡುಪಿಗೆ 18, ದ.ಕ ಜಿಲ್ಲೆಗೆ 19ನೇ ಸ್ಥಾನ

ಗ್ರಾಮೀಣ, ಸರಕಾರಿ ಶಾಲಾ ಮಕ್ಕಳದೇ ಮೇಲುಗೈ ► ನಿಮ್ಮ ಜಿಲ್ಲೆಯ ಫಲಿತಾಂಶ ಇಲ್ಲಿದೆ...

Update: 2023-05-08 08:00 GMT

ಬೆಂಗಳೂರು, ಮೇ 8: ಪ್ರಸಕ್ತ (2022-23) ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದೆ.

ಚಿತ್ರದುರ್ಗ ಜಿಲ್ಲೆ ಶೇಕಡಾ 96.80 ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ,  ಶೇ.96.74 ರಷ್ಟು ಫಲಿತಾಂಶ ಪಡೆದು ಮಂಡ್ಯ ಜಿಲ್ಲೆ 2ನೇ ಸ್ಥಾನದಲ್ಲಿದೆ. 

ಇನ್ನು ಉಡುಪಿ ಜಿಲ್ಲೆ ಶೇಕಡಾ 89.49 ರಷ್ಟು ಫಲಿತಾಂಶ ಪಡೆದು 18ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 89.47 ರಷ್ಟು ಫಲಿತಾಂಶ ಪಡೆದು 19ನೇ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇನ್ನು ಕ್ರಮವಾಗಿ ಹಾಸನ 3ನೇ ಸ್ಥಾನ- ಶೇ.96.68, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 4ನೇ ಸ್ಥಾನ-  ಶೇ.96.48, ಚಿಕ್ಕಬಳ್ಳಾಪುರ ಜಿಲ್ಲೆಗೆ 5ನೇ ಸ್ಥಾನ- ಶೇ.96.15ರಷ್ಟು ಫಲಿತಾಂಶ ಪಡೆದಿದೆ. 

ಕೋಲಾರ ಜಿಲ್ಲೆಗೆ 6ನೇ ಸ್ಥಾನ- ಶೇ.94.6ರಷ್ಟು ಫಲಿತಾಂಶ, ಮೈಸೂರು ಜಿಲ್ಲೆಗೆ 16ನೇ ಸ್ಥಾನ- ಶೇ.89.75ರಷ್ಟು ಫಲಿತಾಂಶ,  ಬೆಂಗಳೂರು ಉತ್ತರ 32ನೇ ಸ್ಥಾನ- ಶೇ.80.93ರಷ್ಟು ಫಲಿತಾಂಶ, ಬೆಂಗಳೂರು ದಕ್ಷಿಣ 33ನೇ ಸ್ಥಾನ- ಶೇ.78.95ರಷ್ಟು ಫಲಿತಾಂಶ ಪಡೆದುಕೊಂಡಿದೆ. 

ಸರ್ಕಾರಿ ಶಾಲೆ ಫಲಿತಾಂಶ –  ಶೇ. 86.74, ಅನುದಾನ ಶಾಲೆ- ಶೇ.85.64, ಖಾಸಗಿ – ಶೇ. 90.89 ಫಲಿತಾಂಶ ಸಾಧಿಸಿದೆ. 4 ಜನ ವಿದ್ಯಾರ್ಥಿಗಳು 625 ಅಂಕಗಳಿಸಿದ್ದಾರೆ. ಗ್ರಾಮೀಣ ಮತ್ತು ಸರ್ಕಾರ ಶಾಲಾ ಮಕ್ಕಳ ಉತ್ತಮ ಸಾಧನೆ ಮಾಡಿದ್ದಾರೆ.

ಜಿಲ್ಲಾವಾರು ಫಲಿತಾಂಶ ಇಲ್ಲಿದೆ... 

Similar News