×
Ad

ಸಕಲ ಸರ್ಕಾರಿ ಗೌರವದೊಂದಿಗೆ ಅಂಬಾರಿ ಹೊತ್ತಿದ್ದ ಬಲರಾಮ ಆನೆ ಅಂತ್ಯಸಂಸ್ಕಾರ

Update: 2023-05-08 21:50 IST

ಮೈಸೂರು,ಮೇ 8: ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಹೆಗ್ಗಳಿಕೆಯ ಬಲರಾಮ ಆನೆ (65) ಅಂತ್ಯ ಸಂಸ್ಕಾರ ಸೋಮವಾರ ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶ ಕಾರೆಕಟ್ಟೆಯಲ್ಲಿ ಅರಮನೆ ಪುರೋಹಿತರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.

ಕಳೆದ ಕೆಲವು ದಿನಗಳಿಂದ ಬಲರಾಮ ಆನೆ ಅನಾರೋಗ್ಯದಿಂದ ಬಳಲುತ್ತಿದ್ದು, ಇಲಾಖೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದರು. ಚಿಕ್ಸಿತೆ  ಸ್ಪಂಧಿಸದೆ ಆನೆ ಮೃತಪಟ್ಟಿತು.

ಇಲಾಖೆಯ ಅಧಿಕಾರಿಗಳು ಮತ್ತು ಮೈಸೂರು ಅರಮನೆಯ ಪ್ರತಿನಿಧಿಯಾಗಿ ರಾಜಮನೆತನದ ಶೃತಿಕೀರ್ತಿ ದೇವಿ ಅರಸು ಇದ್ದರು ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಹರ್ಷ ಕುಮಾರ್ ಚಿಕ್ಕನರಗುಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Similar News