×
Ad

ರಾಜ್ಯದ 9 ಜಿಲ್ಲೆಗಳಲ್ಲಿ ಬುಡಕಟ್ಟು ಜನಾಂಗದವರಿಗೆ 40 ಸಾಂಪ್ರದಾಯಿಕ ಮತಗಟ್ಟೆಗಳ ಸ್ಥಾಪನೆ

Update: 2023-05-08 22:04 IST

ಬೆಂಗಳೂರು, ಮೇ 8: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ರಾಜ್ಯದ 9 ಜಿಲ್ಲೆಗಳಲ್ಲಿ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದವರಾದ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ, ಜೇನುಕುರುಬ, ಕೊರಗ, ಮಲೈಕುಡಿ, ಸಿದ್ದಿಜನಾಂಗದ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ 40 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಿದೆ ಎಂದು ಸಾಂಪ್ರದಾಯಿಕ ಮತಗಟ್ಟೆಗಳ ರಾಜ್ಯ ನೊಡೆಲ್ ಅಧಿಕಾರಿ ಕೆ.ಆರ್. ರಾಜಕುಮಾರ್ ತಿಳಿಸಿದ್ದಾರೆ.

ಸಾಂಪ್ರದಾಯಿಕ ಮತಗಟ್ಟೆಗಳ ವಿವರ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬಸವನಗಿರಿ ಹಾಡಿ ಆಶ್ರಮ ಶಾಲೆ, ಪೆಂಜಹಳ್ಳಿ ಗಿರಿಜನ ಆಶ್ರಮ ಶಾಲೆ, ಭೀಮನಹಳ್ಳಿ ಸರಕಾರಿ ಗಿರಿಜನ ಆಶ್ರಮ ಶಾಲೆ, ಹುಣಸೂರು ತಾಲೂಕಿನ ನಾಗಪುರ ಆಶ್ರಮ ಶಾಲೆ, ಶೆಟ್ಟಿಹಳ್ಳಿ ಆಶ್ರಮ ಶಾಲೆ, ಉಮ್ಮತ್ತೂರು ಗಿರಿಜನ ಆಶ್ರಮ ಶಾಲೆ.

ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲನಿ ಆಶ್ರಮ ಶಾಲೆ, ಅಬಲತ್ತಿ ಆಶ್ರಮ ಶಾಲೆ, ರಾಣಿ ಗೇಟ್ ಸರಕಾರಿ ಗಿರಿಜನ ಆಶ್ರಮ ಶಾಲೆ, ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕಿನ ಕೆ.ಗುಡಿ ಆಶ್ರಮ ಶಾಲೆ, ಪುಂಜನೂರು ಆಶ್ರಮ ಶಾಲೆ, ಬೆಡಗುಳಿ ಆಶ್ರಮ ಶಾಲೆ, ಕೊಳ್ಳೇಗಾಲ ತಾಲೂಕಿನ ಪುರಾಣಿಪೊಡು ಆಶ್ರಮ ಶಾಲೆ, ಗುಂಡ್ಲಪೇಟೆ ತಾಲೂಕಿನ ಮದ್ದೂರು ಆಶ್ರಮ ಶಾಲೆ. 

ಹನೂರು ತಾಲೂಕಿನ ಕೋಣನಕೆರೆ ಆಶ್ರಮ ಶಾಲೆ, ರಾಚಪ್ಪಾಜಿನಗರ ಆಶ್ರಮ ಶಾಲೆ,ಗಾಣಿಗ ಮಂಗಳ ಆಶ್ರಮ ಶಾಲೆÀ, ಅರ್ಥನಾರಿಪುರ ಆಶ್ರಮ ಶಾಲೆ, ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಲಾಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆರೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ವಿರಾಜಪೇಟೆ ತಾಲೂಕಿನ ಸಿ.ಬಿ.ಹಳ್ಳಿ ಸರಕಾರಿ ಗಿರಿಜನ ಆಶ್ರಮ ಶಾಲೆ, ನಾಗರಹೊಳೆ ಸರಕಾರಿ ಗಿರಿಜನ ಆಶ್ರಮ ಶಾಲೆ ಮತ್ತು ಹೆಬ್ಬಾಲೆ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೌಧ, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಗ್ರಾಮಾಂತರ ಹಿರಿಯ ಪ್ರಾಥಮಿಕ ಶಾಲೆ, ಹಕ್ಕಿ-ಪಿಕ್ಕಿ ಕಾಲನಿ ಮತ್ತು ಸಾಗರ ತಾಲೂಕಿನ ಅರ್ಕಲಾದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ, ಹಕ್ಕಿ-ಪಿಕ್ಕಿ ಕಾಲನಿ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಉತ್ತರ ತಾಲೂಕಿನ ಸುರತ್ಕಲ್‍ನಲ್ಲಿರುವ ಕೇಂದ್ರೀಯ ಮಾದರಿ ವಸತಿ ಶಾಲೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಪುತ್ತೂರು ತಾಲೂಕಿನ ಬಲ್ನಾಡು, ಉಜರುಪದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ತಂಗಡಿ ತಾಲೂಕಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ತಾಲೂಕಿನ ಬಿದ್ದಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಂಟ್ವಾಳ ತಾಲೂಕಿನ ಕನ್ಯನ(ದಕ್ಷಿಣ) ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕನ್ಯನ ದಕ್ಷಿಣ ಭಾಗದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶೃಂಗೇರಿ ತಾಲೂಕಿನ ಮೆಣಸಿನಹಾಡ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಜೋಯ್ಡಿ ತಾಲೂಕಿನ ಗರುಡಹಳ್ಳಿ ಹಾಗೂ ಸಾಂಬ್ರಾಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಯಲ್ಲಾಪುರ-ಮುಂಡಗೋಡ ತಾಲೂಕಿನ ಉಮಾಚಗಿ ಸರಕಾರಿ ಪ್ರಾಥಮಿಕ ಶಾಲೆ, ಬಿಳಕಿ ಯಲ್ಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಭಟ್ಕಳ ತಾಲೂಕಿನ ಕಿತ್ರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅಂಗಡಿಹಳ್ಳಿ(ಉತ್ತರ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ರಾಜಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News