×
Ad

ಪೊಲೀಸ್ ಇಲಾಖೆ ಹೆಸರಿನಲ್ಲಿ ನಕಲಿ ನೇಮಕಾತಿ ಪ್ರಕಟನೆ: FIR ದಾಖಲು

Update: 2023-05-08 23:22 IST

ಬೆಂಗಳೂರು, ಮೇ 8: ಪೊಲೀಸ್ ಇಲಾಖೆ ಹೆಸರಲ್ಲಿ ಅನಧಿಕೃತ ವೆಬ್‍ಲಿಂಕ್ ಮೂಲಕ ನಕಲಿ ನೇಮಕಾತಿ ಪ್ರಕಟನೆಯನ್ನು ದುಷ್ಕರ್ಮಿಗಳು ಹೊರಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ksprecruitment.co.in ಹೆಸರಲ್ಲಿ ಅನಧಿಕೃತ ಲಿಂಕ್ ತೆರೆದಿದ್ದು, ಅದು ಅನಧಿಕೃತ ವೆಬ್‍ಲಿಂಕ್ ಮೂಲಕ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ವೆಬ್‍ಸೈಟ್‍ಗೆ ಸಂಪರ್ಕ ಹೊಂದಿಸಿದ್ದಾರೆ. ಅದರಲ್ಲಿ ಕೆಎಸ್‍ಪಿ ರಿಕ್ರೂಟ್ಮೆಂಟ್‍ ಟೆಕ್ನಿಕಲ್ ಸ್ಟಾಫ್ ಎಂಬ ಪುಟತೆರೆದು, 25 ಟೆಕ್ನಿಕಲ್ ಸ್ಟಾಫ್ ನೇಮಕಾತಿ ಇದೆ ಎಂದು ಪ್ರಕಟನೆ ಹೊರಡಿಸಿದ್ದಾರೆ.

ಅದೇ ರೀತಿ, ಅರ್ಜಿ ಶುಲ್ಕ 2 ಸಾವಿರಇದ್ದು ಯುಪಿಐ ಮೂಲಕ ಹಣಪಾವತಿಸಲು ಸೂಚಿಸಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಕೇಂದ್ರ ವಿಭಾಗಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News