ಕರ್ನಾಟಕ ರಾಜ್ಯದ ಚುನಾವಣಾ ಪ್ರವಾಸ ಮುಗಿದಿದ್ದರೆ ಸ್ವಲ್ಪ ಮಣಿಪುರದತ್ತ ಗಮನ ಕೊಡಿ: ಮೋದಿಗೆ ಬಿ.ಕೆ ಹರಿಪ್ರಸಾದ್

''ಆನೆಯ ಸಾವಿಗೆ ಶೋಕ ಸಂತಾಪ ಹೇಳುವ ಪ್ರಧಾನಿಗಳೇ...''

Update: 2023-05-09 04:59 GMT

ಬೆಂಗಳೂರು:  ಪರಿಶಿಷ್ಟ ಪಂಗಡ ಸ್ಥಾನಮಾನ ಕುರಿತಂತೆ ಕೋರ್ಟ್‌ ಆದೇಶವೊಂದನ್ನು ವಿರೋಧಿಸಿ ಬುಡಕಟ್ಟು ಗುಂಪುಗಳು ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಳೆದನಂತರ ಉಂಟಾಗಿರುವ ಗಲಭೆಗಳಿಂದ ಮಣಿಪುರ ನಲುಗಿ ಹೋಗಿದೆ. ಆದರೆ ಇಂತಹ ಸ್ಥಿತಿಯಲ್ಲಿ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಬೇಕಿರುವ ಪ್ರಧಾನಿ ಮೋದಿ ಕೇವಲ ಚುನಾವಣೆಗಾಗಿ ಕರ್ನಾಟಕದಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ ಎಂದು ವಿಪಕ್ಷ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, 'ಮೈಸೂರಿನ ಗಜರಾಜನ ಸಾವಿಗೆ ಶೋಕ ಸಂತಾಪ ಹೇಳುವ ಪ್ರಧಾನಿಗಳೇ, ಕರ್ನಾಟಕ ರಾಜ್ಯದ ಚುನಾವಣಾ ಪ್ರವಾಸ ಮುಗಿದಿದ್ದರೆ ಸ್ವಲ್ಪ ಮಣಿಪುರದತ್ತ ಗಮನ ಕೊಡಿ' ಎಂದು ಒತ್ತಾಯಿಸಿದ್ದಾರೆ. 

''55ಕ್ಕೂ ಹೆಚ್ಚು ಜನರ ಸಾವಾಗಿದೆ. ಹಿಂಸಾಚಾರದಿಂದ ಆಸ್ತಿ-ಪಾಸ್ತಿ ಕಳೆದುಕೊಂಡ ಕುಟುಂಬಗಳ ಅರಣ್ಯ ರೋಧನ ಮುಗಿಲು ಮುಟ್ಟಿದೆ.56ಇಂಚಿನ ಎದೆಯಲ್ಲಿ ಕಿಂಚಿತ್ತಾದರೂ ಮಾನವೀಯತೆ ಇರಬೇಕಲ್ವಾ ಪ್ರಧಾನಿಗಳೇ?'' ಎಂದು ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. 

Similar News