ಎಸೆಸೆಲ್ಸಿ ಪರೀಕ್ಷೆ: ಫೈಝ್ ಅಹ್ಮದ್ ರಿಗೆ 598 ಅಂಕ
Update: 2023-05-09 11:43 IST
ಶಿವಮೊಗ್ಗ, ಮೇ 9: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಗರದ ಪ್ರಗತಿ ಸಂಯುಕ್ತ ಶಾಲೆಯ ವಿದ್ಯಾರ್ಥಿ ಫೈಝ್ ಅಹ್ಮದ್ 598 (95.68 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಬೈಕಾಡಿಯ ದಿವಂಗತ ಝಾಕಿರ್ ಹುಸೈನ್ ಮತ್ತು ಹಸೀನಾ ಬಾನು ದಂಪತಿಯ ಪುತ್ರ. ಪ್ರಸಕ್ತ ಸಾಗರದ ಉಳ್ಳಾಲ್ ಕಟ್ಟೆ 5ನೇ ಕ್ರಾಸ್ ನಲ್ಲಿ ವಾಸವಾಗಿದ್ದಾರೆ.