ಈಜಲು ಕೆರೆಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಮೃತ್ಯು
Update: 2023-05-09 18:44 IST
ದಾವಣಗೆರೆ : ಈಜಲು ಕೆರೆಗೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲೂಕಿನ ಮುದಿಗೇರೆ ಗ್ರಾಮದಲ್ಲಿ ಮಂಗಳವಾರ ವರದಿಯಾಗಿದೆ.
ಅಜ್ಜಿಹಳ್ಳಿ ಗ್ರಾಮದ ಹೇಮಂತ (15), ಗಣೇಶ್ (16) ಮೃತ ಬಾಲಕರು.
ಇಬ್ಬರೂ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಈ ಹನ್ನೆಲೆಯಲ್ಲಿ ಅಜ್ಜಿಹಳ್ಳಿಯಿಂದ ಹೇಮಂತ ಮುದಿಗೇರೆ ಗ್ರಾಮದ ಅಜ್ಜಿ ಮನೆಗೆ ಬಂದಿದ್ದರೆನ್ನಲಾಗಿದ್ದು, ಮನೆಯವರ ಜೊತೆ ಹೊಲಕ್ಕೆ ತೆರಳಿದ್ದ ಸಂದರ್ಭದಲ್ಲಿ ಬಾಲಕರು ಈಜಾಡಲು ಕೆರೆಗೆ ತೆರಳಿದ್ದಾರೆ. ಈ ವೇಳೆ ಕೆರೆಯಲ್ಲಿ ಉಸುಕಿನಲ್ಲಿ ಕಾಲುಗಳು ಸಿಲಿಕಿದ್ದರಿಂದ ಇಬ್ಬರು ಮೇಲೆ ಬರಲಾರದೆ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.
ಇಬ್ಬರು ಬಾಲಕರು ಸಂಬಂಧಿಕರಾಗಿದ್ದಾರೆ. ಕುಟುಂಬಸ್ಥರ ಅಕ್ರಂದನ ಮುಗಿಲು ಮಟ್ಟಿದೆ. ಈ ಸಂಬಂಧ ಚನ್ನಗಿರಿ ಪೊಲೀಸ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.