×
Ad

ವಿಧಾನಸಭಾ ಚುನಾವಣೆ 2023: ರಾಜ್ಯಾದ್ಯಂತ ಮತದಾನ ಆರಂಭ

Update: 2023-05-10 07:04 IST

ಬೆಂಗಳೂರು, ಮೇ 10: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಚುನಾವಣೆಗೆ ರಾಜ್ಯಾದ್ಯಂತ ಮತದಾನ ಆರಂಭವಾಗಿದೆ. 

ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ 37,777 ಸ್ಥಳಗಳಲ್ಲಿ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಬೆಳಗ್ಗೆಯೇ ಕೆಲವು ಮತಗಟ್ಟೆಗಳ ಮುಂದೆ ಮತದಾರರು ಸಾಲುಗಟ್ಟಿರುವುದು ಕಂಡು ಬಂತು. 

ರಾಜ್ಯದ ಒಟ್ಟು 5,30,85,566 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕುವುದು ಹೇಗೆ?, ಮತದಾರರಿಗೆ ತಿಳಿದಿರಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ

4 ಲಕ್ಷ ಸಿಬ್ಬಂದಿ ನಿಯೋಜನೆ: ಚುನಾವಣಾ ಕಾರ್ಯಕ್ಕಾಗಿ ಸುಮಾರು 4 ಲಕ್ಷ ಸಿಬ್ಬಂದಿಯನ್ನು ನೇಮಿಸಲಾಗಿದ್ದು, 58,545 ಮತಗಟ್ಟೆಗಳಿಗೆ 62,988 ಬ್ಯಾಲೆಟ್ ಯೂನಿಟ್(ಬಿಯು) ಹಾಗೂ 58,545 ವಿವಿ ಪ್ಯಾಟ್‍ಗಳನ್ನು ಹಂಚಿಕೆ ಮಾಡಲಾಗಿದೆ. 1,15,709 ಬ್ಯಾಲೆಟ್ ಯೂನಿಟ್‍ಗಳು, 82,543 ಸಿಯು ಹಾಗೂ 89,379 ವಿವಿಪ್ಯಾಟ್‍ಗಳನ್ನು ಸುಸ್ಥಿತಿಯಲ್ಲಿ ಇರಿಸಲಾಗಿದೆ.

Similar News