ಗೋವಾದ ಬಸ್ಸುಗಳು ಕರ್ನಾಟದಲ್ಲೇನು ಮಾಡುತ್ತಿವೆ?: ಕಾಂಗ್ರೆಸ್‌ ಪ್ರಶ್ನೆ

Update: 2023-05-10 07:25 GMT

ಬೆಂಗಳೂರು: ವಿಧಾನಸಭಾ ಚುನಾವಣೆ ರಾಜ್ಯದಲ್ಲಿ ಬುಧವಾರ ಆರಂಭಗೊಳ್ಳುವ ಕೆಲವೇ ಗಂಟೆಗಳಿಗೆ ಮುಂಚೆ ಉತ್ತರ ಕರ್ನಾಟಕದಲ್ಲಿ ಗೋವದಿಂದ ಬಂದ ಬಸ್ಸುಗಳ ಬಗ್ಗೆ ಕಾಂಗ್ರೆಸ್‌ ತನ್ನ ಆತಂಕವನ್ನು ತೋಡಿಕೊಂಡಿದೆ.

ಈ ಕುರಿತಂತೆ ಕಾಂಗ್ರೆಸ್‌ ವೀಡಿಯೋವೊಂದನ್ನು ಶೇರ್‌ ಮಾಡಿದೆ ಹಾಗೂ ಅಕ್ರಮವಾಗಿ ಹಣವನ್ನು ಸಾಗಿಸಲಾಗುತ್ತಿದೆಯೇ ಆಥವಾ ರಾಜ್ಯದಲ್ಲಿ ಬೋಗಸ್‌ ಮತದಾನ ಮಾಡುವ ಉದ್ದೇಶವೇ ಎಂದು ಪ್ರಶ್ನಿಸಿದೆ.

ಕಾಂಗ್ರೆಸ್‌ ವಕ್ತಾರರಾದ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಮತದಾನ ಆರಂಭಗೊಳ್ಳುವ ಮುನ್ನವೇ ʻರೆಸಾರ್ಟ್‌ʼ ನಂಟು ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ ಹಾಗೂ ಗೋವಾ ಸಚಿವ ವಿಶ್ವಜೀತ್‌ ರಾಣೆ ಅವರು ದಾಂಡೇಲಿಯ ವಿಸ್ಲಿಂಗ್‌ ವುಡ್ಸ್‌ ಜಂಗಲ್‌ ರಿಸಾರ್ಟ್‌ನಲ್ಲಿ ಆರು ಕೊಠಡಿಗಳನ್ನು ಕಾಯ್ದಿರಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

“ಕರ್ನಾಟಕ ಪೊಲೀಸರೆಲ್ಲಿ? ಇಸಿಐ ಕ್ರಮಕೈಗೊಳ್ಳುವುದೇ?” ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ ಸುರ್ಜೇವಾಲ ರಾಜ್ಯದಲ್ಲಿ ಈ ಬಾರಿ ರಿಸಾರ್ಟ್‌ ರಾಜಕೀಯ ಶೀಘ್ರವಾಗಿ ಎಂಟ್ರಿ ಕೊಟ್ಟಿದೆ ಎಂಬ ಸುಳಿವು ನೀಡಿದ್ದಾರೆ.

“ಕದಂಬಾ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌ ಬಸ್ಸುಗಳಲ್ಲಿ ಗೋವಾ ಬಿಜೆಪಿಯು  ಗೋವಾದಿಂದ ಇಂದು ರಾತ್ರಿ ಉತ್ತರ ಕರ್ನಾಟಕಕ್ಕೇಕೆ ಜನರನ್ನು ಸಾಗಿಸುತ್ತಿದೆ? ಏಕೆ??? ಅಕ್ರಮ ಹಣ ಸಾಗಾಟ ನಡೆಯುತ್ತಿದೆಯೇ? ಬೋಗಸ್‌ ಮತದಾನದ ಉದ್ದೇಶವೇ?” ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

Similar News