ಮತದಾನಕ್ಕೂ ಮುನ್ನ ಮತ ಗಟ್ಟೆ ಬಳಿ ಕುಸಿದು ಬಿದ್ದು ವೃದ್ಧೆ ಮೃತ್ಯು
Update: 2023-05-10 14:08 IST
ಬೆಳಗಾವಿ: ಮತ ಚಲಾಯಿಸಲು ಬಂದಿದ್ದ ವೃದ್ಧೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಸವದತ್ತಿ ತಾಲೂಕಿನ ಯರಝರ್ವಿ ಸಮೀಪ ಬುಧವಾರ ವರದಿಯಾಗಿದೆ.
ಮೃತರನ್ನು ಪಾರವ್ವ ಈಶ್ವರ ಸಿದ್ದಾಳ (68) ಎಂದು ಗುರುತಿಸಲಾಗಿದೆ.
ಯರಝರ್ವಿ ಬಳಿ ಮತ ಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ಪಾರವ್ವ, ಮತದಾನಕ್ಕೂ ಮುನ್ನ ಮತಗಟ್ಟೆ ಅವರಣದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.