×
Ad

ಮಡಿಕೇರಿ: ಅಂಚೆ ಮತದಾನ ನಿರಾಕರಿಸಿ ಮತಗಟ್ಟೆಯಲ್ಲೇ ಮತದಾನ ಮಾಡಿದ 90 ವರ್ಷದ ವೃದ್ಧೆ

Update: 2023-05-10 14:37 IST

ಮಡಿಕೇರಿ ಮೇ 10 : ಅಂಚೆ ಮತದಾನ ನಿರಾಕರಿಸಿ ಮತಗಟ್ಟೆಯಲ್ಲಿ ಮತಗಟ್ಟೆಗೆ ಆಗಮಿಸಿ  ಮತದಾನ ಮಾಡುವ ಮೂಲಕ 90 ವರ್ಷದ  ವೃದ್ಧೆ ಅಮೀನಾ  ಗಮನ ಸೆಳೆದರು.

ನಾಪೋಕ್ಲು ಗ್ರಾ.ಪಂ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಎಂ.ಎಂ. ಶಾದುಲಿ ಅವರ  ಪತ್ನಿ  ಆಮಿನಾ, ಕಳೆದ ಎಲ್ಲಾ ಚುನಾವಣೆಯಲ್ಲೂ ನಾನು ಮತಗಟ್ಟೆಯಲ್ಲೇ ಮತದಾನ ಮಾಡುತ್ತಿದ್ದೇನೆ, ಈ ವರ್ಷ ಯಾಕೆ ಅಂಚೆ ಮತದಾನ ಮಾಡಿಸುತ್ತಿರಿ ಎಂದು ಕೆಲವು ದಿನಗಳ ಹಿಂದೆ ಅಧಿಕಾರಿಗಳು ಅಂಚೆ ಮತದಾನ ಮಾಡಿಸಲು ಮನೆಗೆ ಭೇಟಿ ನೀಡಿದಾಗ  ಪ್ರಶ್ನಿಸಿದ್ದರು. 

ಮತಗಟ್ಟೆಗೆ ನಡೆಯಲು ಸಾಧ್ಯವಿಲ್ಲ ಎಂದು ಮಕ್ಕಳು ಮನ ಒಲಿಸಲು ಪ್ರತ್ನಿಸಿದರೂ  ಮಾತು ಕೇಳದ  ವೃದ್ದೆ  ತಾನು  ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತೇನೆ ಎಂದು ಪಟ್ಟು ಹಿಡಿದ  ಹಿನ್ನೆಲೆ  ಇಂದು ಮಗ ಇಬ್ರಾಹಿಂ ನೊಂದಿಗೆ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

Similar News