×
Ad

ಮಡಿಕೇರಿ: ಸತತ 30ನೇ ಬಾರಿ ಮೊದಲ ಮತದಾರರಾಗಿ ಹಕ್ಕು ಚಲಾಯಿಸಿದ ಮಿಟ್ಟು ಚಂಗಪ್ಪ!

Update: 2023-05-10 15:00 IST

ಮಡಿಕೇರಿ ಮೇ 10: ಮಡಿಕೇರಿಯ ಸಂತಮೈಖಲರ ಶಾಲಾ ಮತಗಟ್ಟೆಯಲ್ಲಿ ಹಿರಿಯ ನಾಗರಿಕ ಮಿಟ್ಟು ಚಂಗಪ್ಪ ಮೊದಲ ಮತದಾರರಾಗಿ ಸತತ 30ನೇ ಬಾರಿಗೆ ಮತ ಚಲಾಯಿಸಿದ ಹಿರಿಮೆಗೆ ಪಾತ್ರರಾದರು.
ಬುಧವಾರ ಸಂತಮೈಖಲರ ಶಾಲಾ ಮೈದಾನಕ್ಕೆ ಬೆಳಗ್ಗೆ 6:30 ಗಂಟೆಗೇ ಆಗಮಿಸಿದ ಮಿಟ್ಟು ಚಂಗಪ್ಪ 7 ಗಂಟೆಗೆ ಮತಗಟ್ಟೆ ತೆರೆಯುತ್ತಿದ್ದಂತೆಯೇ ಪತ್ನಿ ಯಶಿ ಜತೆ ಮೊದಲು ಸರದಿ ಸಾಲಿನಲ್ಲಿ ನಿಂತು ಮತಗಟ್ಟೆಗೆ ಪ್ರಥಮರಾಗಿ ಪ್ರವೇಶಿಸಿ ಹಕ್ಕು ಚಲಾಯಿಸಿದರು.

1962ರಲ್ಲಿ ಪ್ರಥಮ ಬಾರಿಗೆ ಮತಗಟ್ಟೆಯ ಮೊದಲ ಮತದಾರರಾಗಿ ಹಕ್ಕು ಚಲಾಯಿಸಲು ಪ್ರಾರಂಭಿಸಿದ ಮಿಟ್ಟು ಚಂಗಪ್ಪ ಅಲ್ಲಿಂದ ಪ್ರತೀ ಚುನಾವಣೆಯಲ್ಲೂ ಈ ಉತ್ಸವವನ್ನು ಕಾಯ್ದುಕೊಂಡು ಬಂದಿದ್ದಾರೆ.
"ಈ ಬಾರಿ ನಾನು 30ನೇ ಸಲ ಮತದಾನ ಮಾಡುತ್ತಿದ್ದು, ಪ್ರಯೊಬ್ಬ ಮತದಾರರು ಮತ ಚಲಾಯಿಸಬೇಕು" ಎಂದು ಮಿಟ್ಟು ಚಂಗಪ್ಪ ಕರೆ ನೀಡಿದ್ದಾರೆ.

ಮತಹಾಕಿದ ಬಳಿಕ ಮಿಟ್ಟು ದಂಪತಿ ಮತದಾನದ ಸಂಕೇತವಾದ ಇಂಕ್ ಹಾಕಿದ ಬೆರಳನ್ನು ಎತ್ತಿ ಸಂಭ್ರಮ ವ್ಯಕ್ತಪಡಿಸಿದರು.

Similar News