ಹಾಸನ: ಮತ ಚಲಾಯಿಸಿ ಹೊರಬರುತ್ತಲೇ ಕುಸಿದುಬಿದ್ದು ವ್ಯಕ್ತಿ ಮೃತ್ಯು
Update: 2023-05-10 15:44 IST
ಹಾಸನ, ಮೇ 10: ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಮಾಡಿ ಮತಗಟ್ಟೆಯಿಂದ ಹೊರಬರುತ್ತಿದ್ದಂತೆ ಮತದಾರನೋರ್ವ ಕುಸಿದುಬಿದ್ದ ಮೃತಪಟ್ಟ ಘಟನೆ ಬೇಲೂರು ತಾಲೂಕಿನಲ್ಲಿಂದು ನಡೆದಿದೆ.
ಮೃತರನ್ನು ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕೋಲೆ ಗ್ರಾಮದ ನಿವಾಸಿ ಜಯಣ್ಣ(48) ಎಂದು ಗುರುತಿಸಲಾಗಿದೆ. ಅವರಿಂದು ಚಿಕ್ಕೋಲೆ ಗ್ರಾಮದ ಮತಗಟ್ಟೆ ಸಂಖ್ಯೆ 211ರಲ್ಲಿ ಮತದಾನ ಮತ ಕೇಂದ್ರದ ಹೊರಗಡೆ ಬರುತ್ತಿದ್ದಂತೆ ಕುಸಿದುಬಿದ್ದರೆನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ಕರದೊಯ್ಯಲಾಯಿತಾದರೂ ಹೃದಯಘಾತದಿಂದ ಜಯಣ್ಣ ಅದಾಗಲೇ ಕೊನೆಯುಸಿರೆಳೆದಿದ್ದರೆನ್ನಲಾಗಿದೆ.