ವಿಜಯಪುರ ನಗರಕ್ಕೆ ಚಿಂಚೋಳಿಯಿಂದ ನಕಲಿ ಮತದಾರರನ್ನು ಕರೆತಂದ ಯತ್ನಾಳ್ ಬೆಂಬಲಿಗರು: ಕಾಂಗ್ರೆಸ್ ಆರೋಪ

Update: 2023-05-10 16:51 GMT

ವಿಜಯಪುರ: ವಿಜಯಪುರ ನಗರ ಮತಕ್ಷೇತ್ರದಲ್ಲಿ ನಕಲಿ ಮತದಾನ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮ್ಮಿದ್ ಮುಶ್ರಿಫ್ ಆರೋಪಿಸಿದ್ದಾರೆ. 

ವಿಜಯಪುರ ನಗರದಲ್ಲಿ ಬುಧವಾರ ಮಾತನಾಡಿದ ಅವರು, ಭೂತನಾಳ ವ್ಯಾಪ್ತಿಯ ಮತಗಟ್ಟೆಯಲ್ಲಿ ನಕಲಿ ಮತದಾನ ನಡೆಯುತ್ತಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರು ಚಿಂಚೋಳಿಯಿಂದ ಸುಮಾರು 120 ನಕಲಿ ಮತದಾರರನ್ನು ಕರೆತಂದಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತ, ಚುನಾವಣಾ ಆಯೋಗ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. 

ಹಲವಾರು ನಕಲಿ ಮತದಾರರು ತಾವು ಮತದಾನ ಮಾಡಲು ಚಿಂಚೋಳಿಯಿಂದ ವಿಜಯಪುರಕ್ಕೆ ಬಸ್‌ಗಳಲ್ಲಿ ಬಂದಿರುವುದಾಗಿ ಒಪ್ಪಿಕೊಂಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Similar News