×
Ad

ಸಾಗರ ಜೆಡಿಎಸ್ ಅಭ್ಯರ್ಥಿ ಸೈಯದ್ ಝಾಕೀರ್ ವಿರುದ್ದ ದೂರು ದಾಖಲಿಸಿದ ಚುನಾವಣಾ ಆಯೋಗ

Update: 2023-05-10 22:55 IST

ಸಾಗರ : ಜೆಡಿಎಸ್ ಅಭ್ಯರ್ಥಿ ಸೈಯದ್ ಝಾಕೀರ್ ವಿರುದ್ದ ಚುನಾವಣಾ ಆಯೋಗ ದೂರು ದಾಖಲಿಸಿದೆ.

ಸೈಯದ್ ಝಾಕೀರ್ ಜೆಡಿಎಸ್‍ನಿಂದ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಗೆ ಎರಡು ದಿನ ಇರಬೇಕಾದರೆ ಸೈಯದ್ ಝಾಕೀರ್ ತಾವು ಕಣದಿಂದ ಸ್ವಯಂ ನಿವೃತ್ತಿ ತೆಗೆದುಕೊಂಡು, ಕಾಂಗ್ರೇಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರಿಗೆ ವೈಯಕ್ತಿಕ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರು. 

ಸ್ಪರ್ಧೆ ಮಾಡಿರುವ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ಚುನಾವಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಎರಡು ದಿನಗಳಿಗಿಂತ ಮೊದಲು ತಮ್ಮ ಅಭ್ಯರ್ಥಿತನಕ್ಕೆ ನಿವೃತ್ತಿ ಘೋಷಣೆ ಮಾಡಬೇಕಾಗಿತ್ತು. ಆದರೆ ಸೈಯದ್ ಝಾಕೀರ್ ಚುನಾವಣಾ ನಿಯಮ ಪಾಲನೆ ಮಾಡದೆ ಇರುವುದರಿಂದ ಅವರ ಮೇಲೆ ಎಫ್‍ಎಸ್‍ಟಿ ತಂಡವು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಿದೆ.

Similar News