×
Ad

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ಏನು?

Update: 2023-05-11 11:53 IST

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಲೆಕ್ಕಾಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬರಲಿದೆ. ನಾವು 141 ಸ್ಥಾನಗಳನ್ನು ದಾಟುತ್ತೇವೆ ಎಂಬ ಭರವಸೆ ಇದೆ. ನಮಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ ಎಂದು ಹೇಳಿದರು. 


ಈ ಎಕ್ಸಿಟ್ ಪೋಲ್ ಗಳನ್ನು ನಾನು ನಂಬುವುದಿಲ್ಲ. ಈಗ ಮಾಧ್ಯಮಗಳು ತೋರಿಸುತ್ತಿರುವ ವರದಿಗಳು ಸುಳ್ಳಾಗುತ್ತವೆ. ಮಾಧ್ಯಮಗಳ ಲೆಕ್ಕಾಚಾರ ಬೇರೆ, ನಮ್ಮ ಲೆಕ್ಕಾಚಾರ ಬೇರೆ. ಈ ಬಾರಿ ಮಂಡ್ಯ, ಮೈಸೂರು ಮತ್ತು ಹಾಸನ ಭಾಗಗಳಲ್ಲೇ ಸುಮಾರು 23 ರಿಂದ 24 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಕೊಡಗಿನಲ್ಲೂ ಎರಡು ಸ್ಥಾನ ಗೆಲ್ಲುವ ಭರವಸೆ ಇದೆ. ಇದರಿಂದಾಗಿ ನಮ್ಮ ಸ್ಥಾನಗಳು ಹೆಚ್ಚಲಿವೆ ಎಂದು ಡಿಕೆಶಿ ಭರವಸೆ ವ್ಯಕ್ತಪಡಿದ್ದಾರೆ.

Similar News