×
Ad

ತರೀಕೆರೆ: ಬಜರಂಗದಳ ಕಾರ್ಯಕರ್ತನ 'ಪತಿವ್ರತೆ' whatsapp ಸ್ಟೇಟಸ್ ಗೆ ಕೆರಳಿದ ಗ್ರಾಮಸ್ಥರು

ಆರೋಪಿಯ ಬಂಧನಕ್ಕೆ ಆಗ್ರಹಿಸಿ ತಡರಾತ್ರಿ ಠಾಣೆಯೆದುರು ಜಮಾಯಿಸಿದ ಲಕ್ಕವಳ್ಳಿ ನಾಗರಿಕರು

Update: 2023-05-11 12:09 IST

ಚಿಕ್ಕಮಗಳೂರು, ಮೇ 11:  ರಂಗೇನಹಳ್ಳಿ ಗ್ರಾಮದ ಬಜರಂಗದಳ ಕಾರ್ಯಕರ್ತನೊಬ್ಬ ಹಾಕಿದ್ದ 'ಪತಿವ್ರತೆ' ವಾಟ್ಸ್ ಆ್ಯಪ್ ಸ್ಟೇಟಸ್ ನಿಂದ ಕೆರಳಿದ ಸ್ಥಳೀಯರು ತಡರಾತ್ರಿ ವೇಳೆ ಪೊಲೀಸ್ ಠಾಣೆಯೆದುರು ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಬುಧವಾರ ನಡೆದಿದೆ.

ಬಜರಂಗದಳದ ಕಾರ್ಯಕರ್ತನೆನ್ನಲಾದ ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದ ನಿವಾಸಿ ಕಾರ್ತಿಕ್ ಎಂಬಾತ 'ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ' ಎಂದು whatsapp status ಹಾಕಿದ್ದನೆನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಆಕ್ರೋಶಿತರಾದರು. ಆರೋಪಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲಕ್ಕವಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

 ಮುಸ್ಲಿಮ್ ಸಂಘಟನೆಗಳು ಹಾಗೂ ಸ್ಥಳೀಯರು ತಡರಾತ್ರಿ ಠಾಣೆಯೆದುರು ಧರಣಿ ನಡೆಸಿದರು.

ಆರೋಪಿ ವಿರುದ್ಧ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Similar News