×
Ad

ಚುನಾವಣೋತ್ತರ ಸಮೀಕ್ಷೆ ಬಗ್ಗೆ ನಂಬಿಕೆ ಇಲ್ಲ: ಕೆ ಎಸ್ ಈಶ್ವರಪ್ಪ

Update: 2023-05-11 13:07 IST

ಸುಬ್ರಹ್ಮಣ್ಯ: ಚುನಾವಣೋತ್ತರ ಸಮೀಕ್ಷೆ ಬಗ್ಗೆ ನನಗೆ ಯಾವುದೇ ನಂಬಿಕೆ ಇಲ್ಲ. ಜನರ ಮೇಲೆ ನಂಬಿಕೆ ಇದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಹುಮತ ಬರುವ ವಿಶ್ವಾಸ ಇದೆ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 26, ಬಿಜೆಪಿಗೆ 1 ಸ್ಥಾನ ಎಂದು ಸಮೀಕ್ಷೆ ಹೇಳಿತ್ತು. ಆದರೆ ಫಲಿತಾಂಶ ಬಂದಾಗ ಬಿಜೆಪಿ 25, ಕಾಂಗ್ರೆಸ್ 1 ಸ್ಥಾನ ಪಡೆದಿತ್ತು ಎಂದು ಹೇಳಿದರು.

ಬಿಜೆಪಿ ಸರಕಾರ ಬಂದ ಮೇಲೆ ನಿಮಗೆ ಯಾವ ಸ್ಥಾನ ಸಿಗಬಹುದು ಎಂಬ ಮಾಧ್ಯಮದವರ ಪ್ರಶ್ನೆಗೆ  ಉತ್ತರಿಸಿದ ಈಶ್ವರಪ್ಪ, ಇದು ಬಿಜೆಪಿ ಕೇಂದ್ರ ನಾಯಕರ ನಿರ್ಧಾರದಂತೆ ಇರಬಹುದು. ಆದರೂ ಈ ಬಾರಿಯೂ ಬಿಜೆಪಿ ಬಹುಮತ ಪಡೆದು ಸರಕಾರ ನಡೆಸಲಿದೆ ಎಂದರು.

ಈ ಸಂದರ್ಭದಲ್ಲಿ ಮಗ ಕಾಂತೇಶ್ ಮತ್ತು ಸೊಸೆ ಈಶ್ವರಪ್ಪ ಅವರ ಜೊತೆಗಿದ್ದರು.

Similar News