×
Ad

ಕಾಡುಕೋಣ ಢಿಕ್ಕಿ; ಪ್ರಪಾತಕ್ಕೆ ಬಿದ್ದ ಆಟೋ

Update: 2023-05-11 20:14 IST

ಮಡಿಕೇರಿ ಮೇ 11 : ಕಾಡುಕೋಣ ಢಿಕ್ಕಿ ಹೊಡೆದ ಪರಿಣಾಮ ಆಟೋವೊಂದು ಪ್ರಪಾತಕ್ಕೆ ಬಿದ್ದ ಘಟನೆ ಮಡಿಕೇರಿ ಸಮೀಪದ ಉದಯಗಿರಿಯಲ್ಲಿ ಗುರವಾರ ವರದಿಯಾಗಿದೆ.

ಚಂದ್ರಗಿರಿ ನಿವಾಸಿ ಝೈನುದ್ದೀನ್ ಎಂಬುವರಿಗೆ ಸೇರಿದ ಆಟೋ ಸುಮಾರು 30 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ. 

ಘಟನೆಯಲ್ಲಿ ಅದೃಷ್ಟವಶತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Similar News