×
Ad

ಅವಿದ್ಯಾವಂತರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆಂದು ಟ್ವೀಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ; ಜನರ ಆಕ್ರೋಶ

Update: 2023-05-11 21:45 IST

ಬೆಂಗಳೂರು: ಅನಕ್ಷರಸ್ಥರು ಹೆಚ್ಚಾಗಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ ಎಂದು ಲೇವಡಿ ಮಾಡಿ ಬಲಪಂಥೀಯ ಪ್ರಚಾರಕ ಚಕ್ರವರ್ತಿ ಸೂಲಿಬೆಲೆ ಹಾಕಿರುವ ಟ್ವೀಟ್ ಗೆ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಸೂಲಿಬೆಲೆ ಟ್ವೀಟ್ ಗೆ, ಪ್ರಧಾನಿ ನರೇಂದ್ರ ಮೋದಿ ಅವರ ವಿಧ್ಯಾಭ್ಯಾಸವನ್ನು ಉಲ್ಲೇಖಿಸಿದ ಕೆಲವರು, ಇವರಿಗಿಂತ ಅವಿದ್ಯಾವಂತರು ಯಾರೂ ಇರಲಿಕ್ಕಿಲ್ಲ ಎಂದಿದ್ದಾರೆ.

ಏನು ಅಂತ ಮಾತಾಡ್ತಾ ಇದ್ದೀರಾ ಸರ್? ಹಾಗಿದ್ರೆ ನೀವು ಹೇಳೋ ಪ್ರಕಾರ ಮೋದಿ ಅವರು ಕೂಡ ಕಾಂಗ್ರೆಸ್ ಗೆ ವೋಟ್ ಹಾಕಿದ್ದಾರೆ ಅಂತಾನಾ? ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರತಾಪ ರೆಡ್ಡಿ ಎಂಬವರು ಪ್ರತಿಕ್ರಿಯೆ ನೀಡಿ, 'ಹಾಗಾದರೆ ನೀವು ಅಶಿಕ್ಷಿತ ಜನರು ನಿಷ್ಪ್ರಯೋಜಕ ಎಂದು ಹೇಳುತ್ತಿದ್ದೀರೇ?.. ವಿದ್ಯಾವಂತ ಬಿಜೆಪಿ ಬಫೂನ್‌ಗಳಿಗಿಂತ ಅವಿದ್ಯಾವಂತರು 110% ಉತ್ತಮರು.' ಎಂದು ಟ್ವೀಟ್ ಮಾಡಿದ್ದಾರೆ.

'ಅಚ್ಚರಿಯೇನಿಲ್ಲ. ಹೆಚ್ಚಿನ ವಿದ್ಯಾವಂತರು ಸಂಘಿಗಳು, ಹಿಂದೂ ಪ್ರಾಬಲ್ಯವಾದಿಗಳು ಮತ್ತು ಮುಸ್ಲಿಂ ವಿರೋಧಿಗಳು.  ಅವರು ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿಗೆ ಮತ ಹಾಕಿದರೆ ಆಶ್ಚರ್ಯವಿಲ್ಲ.' ಎಂದು ಸಂತೋಷ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ... ತರೀಕೆರೆ: ಬಜರಂಗದಳ ಕಾರ್ಯಕರ್ತನ 'ಪತಿವ್ರತೆ' whatsapp ಸ್ಟೇಟಸ್ ಗೆ ಕೆರಳಿದ ಗ್ರಾಮಸ್ಥರು

Similar News