ಮಡಿಕೇರಿ: ಬಾವಿಗೆ ಬಿದ್ದು 3 ವರ್ಷದ ಮಗು ಮೃತ್ಯು
Update: 2023-05-12 16:48 IST
ಮಡಿಕೇರಿ ಮೇ 12 : ಗೋಣಿಕೊಪ್ಪಲಿನ 3 ವರ್ಷದ ಮಗುಕೋಟೂರು ಗ್ರಾಮದ ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಪೆಮ್ಮಂಡ ರೋಶನ್, ಇಸು ದಂಪತಿ ಪುತ್ರಿ ಸಿಯಾನ್ (3) ಮೃತ ಮಗು ಎಂದು ತಿಳಿದು ಬಂದಿದೆ.
ಬುಧವಾರ ಸಂಜೆ ಬಲೂನ್‍ನಲ್ಲಿ ಆಟವಾಡುತ್ತಿದ್ದಾಗ ಮನೆಯ ಸಮೀಪವಿದ್ದ ಬಾವಿಗೆ ಬಲೂನ್ ಬಿದ್ದಿದೆ. ಇದನ್ನು ತೆಗೆಯಲು ಪ್ರಯತ್ನಿಸುತ್ತಿದ್ದ ಸಂದರ್ಭ ಮಗು ಬಾವಿಗೆ ಜಾರಿ ಬಿದ್ದಿದೆ ಎನ್ನಲಾಗಿದೆ. ಮನೆಯ ಒಳಗೆ ಇದ್ದ ಪಾಲಕರು ಮಗುವನ್ನು ಹುಡುಕಿಕೊಂಡು ಬಂದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಯಿತು ಎಂದು ಹೇಳಲಾಗಿದೆ.