×
Ad

ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು; ತಪ್ಪಿದ ಅನಾಹುತ

Update: 2023-05-12 19:59 IST

ಮಡಿಕೇರಿ ಮೇ 12 : ಮುಖ್ಯ ರಸ್ತೆಯ ಬದಿಯಲ್ಲಿನ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿಯಾಗಿ, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪೊನ್ನಂಪೇಟೆಯಲ್ಲಿ  ನಡೆದಿದೆ.

ಕುಟ್ಟ ರಸ್ತೆಯಿಂದ ಪೊನ್ನಂಪೇಟೆ ಕಡೆಗೆ ಬರುತ್ತಿದ್ದ  ಕಾರೊಂದು ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ್ದು,  ನಂತರ ಎಪಿಸಿಎಂಎಸ್ ಕಟ್ಟಡದಲ್ಲಿದ್ದ ಎಳನೀರು ಅಂಗಡಿಗೆ ಕೂಡ ನುಗ್ಗಿದೆ. ಅದೃಷ್ಟವಶಾತ್  ಕಾರಿನಲ್ಲಿದ್ದ ನಾಲ್ವರು ಸಣ್ಣ ಪುಟ್ಟ  ಗಾಯಗಳಿಂದ ಪಾರಾಗಿದ್ದಾರೆ. ಸಮೀಪದ ರಾಮಕೃಷ್ಣ ಸೇವಾ ಆಶ್ರಮದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Similar News