ಕಾಂಗ್ರೆಸ್ ಶಾಸಕರನ್ನು ಹೊರ ರಾಜ್ಯದ ಹೋಟೆಲ್ ಗೆ ಸ್ಥಳಾಂತರ ಸಾಧ್ಯತೆ
Update: 2023-05-13 10:50 IST
ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಮುನ್ನಡೆಯಲ್ಲಿ ಮ್ಯಾಜಿಕ್ ನಂಬರ್ ದಾಟಿದೆ.
ಈ ಹಿನ್ನೆಲೆ ಕಾಂಗ್ರೆಸ್ ನಿಂದ ಗೆಲ್ಲುವ ಶಾಸಕರನ್ನು ಒಟ್ಟುಗೂಡಿಸಲು ಪಕ್ಷದ ವರಿಷ್ಠರು ತಂತ್ರಗಾರಿಕೆ ನಡೆಸಿದ್ದು, ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳಲು ಹೊರ ರಾಜ್ಯ ಅಥವಾ ಹೋಟೆಲ್ ಗಳಿಗೆ ಸ್ಥಳಾಂತರ ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಆಪರೇಷನ್ ಕಮಲ ಮಾಡಲು ಬಿಜೆಪಿ ಹೇಗೂ ಸಜ್ಜಾಗಿದ್ದು, ರಿವರ್ಸ್ ಆಪರೇಷನ್ ಮಾಡಲು ಕಾಂಗ್ರೆಸ್ ಕೂಡಾ ತಯಾರಿ ನಡೆಸಿದೆ. ಅದಕ್ಕಾಗಿ ಕಾಂಗ್ರೆಸ್ ತಂತ್ರಗಾರಿಕೆ ನಡೆಸಿದ್ದು, ಬಿಜೆಪಿಯ ಯಾವುದೇ ಆಮಿಷಕ್ಕೂ ಒಳಗಾಗಬಾರದೆಂಬ ಸ್ಪಷ್ಟ ಸಂದೇಶವನ್ನು ಈಗಾಗಲೇ ಪಕ್ಷ ತನ್ನ ಅಬ್ಯರ್ಥಿಗಳಿಗೆ ನೀಡಿದೆ ಎನ್ನಲಾಗಿದೆ.