ಹಾಸನದಲ್ಲಿ ಜೆಡಿಎಸ್ ನ ಸ್ವರೂಪ್ ಗೆ ಗೆಲುವು; ಬಿಜೆಪಿಯ ಪ್ರೀತಂ ಗೌಡಗೆ ಸೋಲು

ಅಧಿಕೃತ ಘೋಷಣೆ ಬಾಕಿ

Update: 2023-05-13 05:58 GMT

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್. ಸ್ವರೂಪ್ ಬಿಜೆಪಿಯ ಪ್ರೀತಂ ಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ. 

ಸುಮಾರು 8 ಸಾವಿರ ಮತಗಳ ಅಂತರದಿಂದ ಸ್ವರೂಪ್ ಗೆಲುವು ದಾಖಲಿಸಿದ್ದಾರೆ. 

►ಕಾಂಗ್ರೆಸ್ ನ ಇಬ್ಬರಿಗೆ ಗೆಲುವು

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಕಾಂಗ್ರೆಸ್ ನ ಎನ್.ಟಿ ಶ್ರೀನಿವಾಸ್ 40 ಸಾವಿರ ಮತಗಳ ಅಂತರದಲ್ಲಿ ಗೆದ್ದರೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ರಘು ಮೂರ್ತಿ 16 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

Similar News