×
Ad

ಮೈಸೂರು: ಮತ ಎಣಿಕೆ ಕೇಂದ್ರಕ್ಕೆ ಸಿದ್ದರಾಮಯ್ಯ ಭೇಟಿ

Update: 2023-05-13 11:35 IST

ಮೈಸೂರು : ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೇಂದ್ರಕ್ಕೆ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಭೇಟಿ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಬಹಳ ಹಸನ್ಮುಖಿಯಾಗಿಯೇ ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಸಿದ್ದರಾಮಯ್ಯ ಮಾಧ್ಯಮದವರತ್ತ ವಿಜಯೋತ್ಸವದ ಸಿಂಬಲ್ ತೋರಿಸಿ ನಗೆ ಬೀರಿದರು.

ಬಳಿಕ ಪಡುವಾರಹಳ್ಳಿಯ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆಯುತ್ತಿರುವ ವರುಣಾ ಕ್ಷೇತ್ರದ ಮತ ಎಣಿಕೆ ಕೆಂದ್ರದತ್ತ ತೆರಳಿದರು.

ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ರಾಜ್ಯ ಮತ್ತು ದೇಶದಿಂದ ಆಗಮಿಸಿರುವು ಮಾಧ್ಯಮದವರು ಸುತ್ತುವರಿದು ಚಿತ್ರೀಕರಣ ಮಾಡಿದರು. ಒಬ್ಬರ ಮೇಲೆ ಒಬ್ಬರು ಬಿದ್ದು ಸಿದ್ದರಾಮಯ್ಯ ಅವರು ಆಗಮಿಸುವ ಚಿತ್ರೀಕರಣ ಮಾಡಿದರು. ಈ ವೇಳೆ ಪೊಲೀಸರು ಮಾಧ್ಯಮದವರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು.

Similar News