ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿಗೆ ಸೋಲು; ತೀವ್ರ ಮುಖಭಂಗ

Update: 2023-05-14 09:59 GMT

ಚಿಕ್ಕಮಗಳೂರು: 6 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಸಿ.ಟಿ ರವಿ ಸೋಲು ಕಂಡಿದ್ದಾರೆ. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿ.ಟಿ ರವಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ತನ್ನ ಆಪ್ತನಾಗಿದ್ದ ಎಚ್.ಡಿ ತಮ್ಮಯ್ಯ ವಿರುದ್ಧವೇ ಸೋಲನುಭವಿಸಿ ತೀವ್ರ ಮುಖಭಂಗಕ್ಕೀಡಾಗಿದ್ದಾರೆ. 

ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಂಚೆ ಮತಗಳು ಸೇರಿದಂತೆ ಒಟ್ಟು 1,70,326 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಸಿ.ಟಿ.ರವಿ 79,128 ಮತಗಳನ್ನು ಪಡೆದಿದ್ದರೇ, ಕಾಂಗ್ರೆಸ್ ಪಕ್ಷದ ಎಚ್.ಡಿ.ತಮ್ಮಯ್ಯ 85,054 ಮತಗಳನ್ನು ಪಡೆದಿದ್ದಾರೆ. ಎಚ್.ಡಿ.ತಮ್ಮಯ್ಯ ಅವರು 5926 ಮತಗಳಿಂದ ಗೆಲುವು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿದ್ದ ಜೆಡಿಎಸ್ ಪಕ್ಷದ ಬಿ.ಎಂ.ತಿಮ್ಮಶೆಟ್ಟಿ 1763 ಮತಗಳನ್ನು ಪಡೆದಿದ್ದರೇ, ಆಪ್ ಪಕ್ಷದ ಈರೇಗೌಡ 524, ಬಿಎಸ್ಪಿಯ ಕೆ.ಬಿ.ಸುಧಾ 531 ಮತಗಳಿಸಿದ್ದಾರೆ. ಕ್ಷೇತ್ರದಲ್ಲಿ 849 ನೋಟ ಮತಗಳು ಚಲಾವಣೆಯಾಗಿದ್ದರೇ, 254 ಮತಗಳು ತಿರಸ್ಕೃತಗೊಂಡಿವೆ.

Similar News