ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಗುಬ್ಬಿ ಶ್ರೀನಿವಾಸ್ ಜಯಭೇರಿ

Update: 2023-05-13 17:01 GMT

ತುಮಕೂರು : ಗುಬ್ಬಿ ವಿಧಾನ ಸಭಾ ಕ್ಷೇತ್ರದಿಂದ  ಎಸ್.ಆರ್. ಶ್ರೀನಿವಾಸ್(ವಾಸು) ಸತತ ಒಂದೇ ಕ್ಷೇತ್ರದಲ್ಲಿ ಐದನೇ ಬಾರಿ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.

2004ರಿಂದ 2018 ವರೆಗೆ ಅವರು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಪಕ್ಷೇತರ ಅಭ್ಯರ್ಥಿ ಯಾಗಿ, ಮೂರು ಬಾರಿ ಜೆಡಿಎಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು, ಜೆಡಿಎಸ್‍ನ ಅಂತರಿಕ ಬೆಳವಣಿಗೆಗಳಿಂದ ಬೇಸತ್ತು,ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ನೇರ ನಡೆನುಡಿಗೆ ಹೆಸರಾಗಿರುವ ಎಸ್.ಆರ್.ಶ್ರೀ ನಿವಾಸ್ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವ ಶೀತಲ ಸಮರ ಫಲಾಗಿ ಕ್ಷೇತ್ತಕ್ಕೆ ಕಾಲಿಟ್ಟ   ಸಿ.ಎಸ್.ಪುರದ ಬಿ.ಎಸ್.ನಾಗರಾಜು ಅವರನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.

ಇದಲ್ಲದೆ ಗುಬ್ಬಿ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್‍ಗರಿಂದ ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರು ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇವರ ಸೇರ್ಪಡೆಯನ್ನು ವಿರೋಧಿಸಿ ಕಾಂಗ್ರೆಸ್‍ನ ಹೊನ್ನಗಿರಿಗೌಡ,ಪ್ರುರದೀಪ್ ಅವರುಗಳು ಜೆಡಿಎಸ್ ಪಕ್ಷವನ್ನು ಸೇರಿದ್ದರು, ಇದಲ್ಲದೆ ಗೊಲ್ಲ ಸಮುದಾಯದ ಜಿ.ಎನ್.ಬೆಟ್ಟಸ್ವಾಮಿ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ದೊರೆಯದ ಕಾರಣ ಜೆಡಿಎಸ್‍ಗೆ ಸೇರ್ಪಡೆಯಿಂದ ಗೊಲ್ಲರ ಮತಗಳು ಜೆಡಿಎಸ್‍ಗೆ ಅನುಕೂಲವಾಗಿ ಕಾಂಗ್ರೆಸ್ ಅಭ್ಯರ್ಥಿ ಸೋಲ ಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತ.ಆದರೆ ಇಂದಿನ ಫಲಿತಾಂಶ ಅದನ್ನು ಹುಸಿಗೊಳಿಸಿದೆ. 

ಬಿಜೆಪಿಯ ಅಭ್ಯರ್ಥಿ ಎಸ್.ಡಿ.ದಿಲೀಪ್‍ಕುಮಾರ್ ಲಿಂಗಾಯಿತರ ಓಟುಗಳ ಜೊತೆಗೆ ಬಿಜೆಪಿಗೆ ಗೊಲ್ಲರ ಮತಗಳು ಹಾಗೂ ಒಳ ಮೀಸಲಾತಿ ಜಾರಿಗೊಳಿಸಿರುವುದರಿಂದ ದಲಿತ ಮತಗಳು ಕೈ ಹಿಡಿದು ಎಸ್.ಆರ್.ಶ್ರೀನಿವಾಸ್ ಅವರನ್ನು ಪರಾಭವಗೊಳಿಸುತ್ತಾರೆ ಎಂಬ ಲೆಕ್ಕಾಚಾರವು ತಲೆ ಕೆಳಗಾಗಿದೆ.
ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರು ಚುನಾವಣಾ ತಂತ್ರಗಳನ್ನು ಎಣೆಯುವುದರಲ್ಲಿ ನಿಪುಣರು ಎಂಬುದನ್ನು 5ನೇ ಬಾರಿ ಆಯ್ಕೆಯಾಗುವ ಮೂಲಕ ತೋರಿಸಿದ್ದಾರೆ.

ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರು 5ನೇ ಬಾರಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಕಾರಣವಾಗಿದ್ದಾರೆ.ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರು ಕಾಂಗ್ರೆಸ್‍ಗೆ ಬಂದಿದ್ದರಿಂದ ಆ ಪಕ್ಷಕ್ಕೆ ಜಿಲ್ಲೆಯಲ್ಲಿ ಒಂದು ಸ್ಥಾನ ಹೆಚ್ಚು ಪಡೆಯುವಲ್ಲಿ ಯಶಸ್ವಿಯಾಗಿದೆ.

ಜೆಡಿ ಎಸ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವರಾಗಿದ್ದ ವಾಸು ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗಬಹುದೆ? ಎಂಬ ಅನುಮಾನ ಅವರ ಅನುಯಾಯಿಗಳಲ್ಲಿದೆ. 

ಜಿಲ್ಲೆಯ ಡಾ.ಜಿ.ಪರಮೇಶ್ವರ್,(ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ) ಮಾಜಿ ಸಚಿವ, ಶಾಸಕ ಟಿ.ಬಿ.ಜಯಚಂದ್ರ, ಮಧುಗಿರಿ ಶಾಸಕರಾದ ಕೆ.ಎನ್.ರಾಜಣ್ಣ, ಮತ್ತು ತಿಪಟೂರು ಶಾಸಕರಾದ ಕೆ.ಷಡಕ್ಷರಿ ಅವರುಗಳು ಮಂತ್ರಿ ಸ್ಥಾನದ ಅಕಾಂಕ್ಷಿಗಳಾಗಿದ್ದಾರೆ.ಇವರೊಂದಿಗೆ ಸತತ ಐದನೇ ಬಾರಿಗೆ ಗೆಲುವು ಸಾಧಿಸಿರುವ ಎಸ.ಆರ್.ವಾಸು ಹೆಸರು ಸೇಪರ್ಡೆಯಾಗಲಿದೆ

Similar News