ರಾಹುಲ್ ಗಾಂಧಿಯವರ 'ಭಾರತ್ ಜೋಡೊ' ಸಾಗಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯಭೇರಿ

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ

Update: 2023-05-13 17:50 GMT

ಬೆಂಗಳೂರು: 'ಮೇಕೆದಾಟು ಹೋರಾಟ, ಭಾರತ್ ಜೋಡೊ ಯಾತ್ರೆ ಕಾಂಗ್ರೆಸ್‍ಗೆ ಅನುಕೂಲವಾಗಿದೆ. ಯಾತ್ರೆ ಹೋದಲ್ಲೆಲ್ಲಾ ಕಾಂಗ್ರೆಸ್ ಗೆದ್ದಿದೆ. ಇದಕ್ಕೆ ರಾಹುಲ್ ಗಾಂಧಿಗೆ ಧನ್ಯವಾದ ಸಲ್ಲಿಸುತ್ತೇನೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕಾಗ್ರೆಸ್ ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಟ್ವಟರ್ ನಲ್ಲಿ ಈ ಸಂಬಂಧ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ವಿವರಿಸಿದ್ದಾರೆ. 

ಭಾರತ್ ಜೋಡೋ ಯಾತ್ರೆ ಸಾಗಿದ 20 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 15 ಮತ್ತು ಉಳಿದ ಐದರಲ್ಲಿ ಮೂರು ಜೆಡಿಎಸ್ (ಎಸ್) ಮತ್ತು ಎರಡು ಬಿಜೆಪಿ ಪಾಲಾಗಿದೆ. ಬಳ್ಳಾರಿ (ಎಸ್‌ಟಿ), ಬಳ್ಳಾರಿ ನಗರ, ಗುಂಡ್ಲುಪೇಟೆ, ಚಳ್ಳಕೆರೆ (ಎಸ್‌ಟಿ), ಹಿರಿಯೂರು, ಮೊಳಕಾಲ್ಮೂರು (ಎಸ್‌ಟಿ), ನಾಗಮಂಗಲ, ಶ್ರೀರಂಗಪಟ್ಟಣ, ನಂಜನಗೂಡು (ಎಸ್‌ಸಿ), ನರಸಿಂಹರಾಜ, ವರುಣ, ರಾಯಪುರ ಗ್ರಾಮಾಂತರ, ಗುಬ್ಬಿ, ಶಿರಾ, ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

Similar News