ಸೋಲಿನ ಬೆನ್ನಲ್ಲೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಎಂ. ಪಿ. ರೇಣುಕಾಚಾರ್ಯ
Update: 2023-05-14 10:01 IST
ದಾವಣಗೆರೆ: 'ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ' ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎಂ.ಪಿ ರೇಣುಕಾಚಾರ್ಯ ಪ್ರಕಟಿಸಿದ್ದಾರೆ.
ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅಭಿವೃದ್ಧಿ ಕೆಲಸ, ಕೋವಿಡ್‍ನಲ್ಲಿ ಜೀವ ಹಂಗು ತೊರೆದರೂ ಜನರು ಸೋಲಿಸಿದರು. ರಾಜಕೀಯದಿಂದ ನಿವೃತ್ತಿ ಪಡೆದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ ಬರುವುದಿಲ್ಲ' ಎಂದು ಹೇಳಿದರು.
ಈ ವೇಳೆ ಅಭಿಯಾನಿಯೊಬ್ಬರು ವಿಷ ಸೇವಿಸಲು ಮುಂದಾದ ಘಟನೆಯು ನಡೆಯಿತು. ಕೂಡಲೇ ಸ್ಥಳದಲ್ಲಿದ್ದ ಕಾರ್ಯಕರ್ತರು ಆತನನ್ನು ತಡೆದು ಸಮಾಧಾನಗೊಳಿಸಿದರು.