×
Ad

ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಬೆಂಬಲಿಗರ ಆಕ್ರೋಶ

Update: 2023-05-14 13:56 IST

ದಾವಣಗೆರೆ: ಬಿಜೆಪಿ‌ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸೋಲಿನ ಬೆನ್ನಲ್ಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಹಿನ್ನೆಲೆ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ನಿವಾಸದ ಮುಂದೆ ಜಮಾಯಿಸಿದ ಬೆಂಬಲಿಗರು, 'ಬಿಎಲ್ ಸಂತೋಷ್ ರಾಜ್ಯವನ್ನು ಬಿಟ್ಟು ತೊಲಗಬೇಕಿದೆ. ಆಗ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ' ಎಂದು ಹೇಳುತ್ತಾ ಬಿಎಲ್ ಸಂತೋಷ್ ವಿರುದ್ದ ಧಿಕ್ಕಾರ ಕೂಗಿದರು. 

ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ

'ರಾಜ್ಯ ಹಾಳು ಮಾಡಿದ ಬಿಎಲ್ ಸಂತೋಷ್​ಗೆ ದಿಕ್ಕಾರ. ಬಿಎಸ್​ ಯಡಿಯೂಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗೆ ಇಳಿಸಿದ್ದೇ ರೇಣುಕಾಚಾರ್ಯ ಸೋಲಿಗೆ ಕಾರಣ. ಕರ್ನಾಟಕದಲ್ಲಿ ಬಿಎಲ್ ಸಂತೋಷ್ ಬಿಜೆಪಿ ಹಾಳು ಮಾಡಿದ್ದಾರೆ. ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಪಡೆದರೇ ನಾವು ಸಾಮೂಹಿಕ ರಾಜೀನಾಮೆ ನೀಡುತ್ತೇವೆ' ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

Similar News