×
Ad

ಸಿ.ಟಿ.ರವಿ ಸೋಲಿಸಲು ಕಾಂಗ್ರೆಸ್​ ಬೆಂಬಲಿಸಿದ್ದ ಜೆಡಿಎಸ್ ಎಂಎಲ್​ಸಿಗೆ ಹಾಲಿನ ಅಭಿಷೇಕ

Update: 2023-05-14 16:10 IST

ಚಿಕ್ಕಮಗಳೂರು: ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್​ನ ಎಚ್.ಡಿ ತಮ್ಮಯ್ಯ ಗೆಲುವು ಸಾಧಿಸಿದ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಎಂಎಲ್​ಸಿ ಎಸ್​ಎಲ್​ ಭೋಜೇಗೌಡ ಅವರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ.

ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರೇ ಭೋಜೇಗೌಡರಿಗೆ ಸನ್ಮಾನ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಭೋಜೇಗೌಡರು ಬಹಿರಂಗವಾಗಿ ಮತಯಾಚನೆ ನಡೆಸಿದ್ದರು. ಭೋಜೇಗೌಡ ಅವರು ಕುಮಾರಸ್ವಾಮಿ ಆಪ್ತರೂ ಆಗಿದ್ದಾರೆ.​

ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಂಚೆ ಮತಗಳು ಸೇರಿದಂತೆ ಒಟ್ಟು 1,70,326 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಸಿ.ಟಿ.ರವಿ 79,128 ಮತಗಳನ್ನು ಪಡೆದಿದ್ದರೇ, ಕಾಂಗ್ರೆಸ್ ಪಕ್ಷದ ಎಚ್.ಡಿ.ತಮ್ಮಯ್ಯ 85,054 ಮತಗಳನ್ನು ಪಡೆದಿದ್ದಾರೆ. ಎಚ್.ಡಿ.ತಮ್ಮಯ್ಯ ಅವರು 5926 ಮತಗಳಿಂದ ಗೆಲುವು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿದ್ದ ಜೆಡಿಎಸ್ ಪಕ್ಷದ ಬಿ.ಎಂ.ತಿಮ್ಮಶೆಟ್ಟಿ 1763 ಮತಗಳನ್ನು ಪಡೆದಿದ್ದರೆ, ಆಪ್ ಪಕ್ಷದ ಈರೇಗೌಡ 524, ಬಿಎಸ್ಪಿಯ ಕೆ.ಬಿ.ಸುಧಾ 531 ಮತಗಳಿಸಿದ್ದಾರೆ. ಕ್ಷೇತ್ರದಲ್ಲಿ 849 ನೋಟ ಮತಗಳು ಚಲಾವಣೆಯಾಗಿದ್ದರೇ, 254 ಮತಗಳು ತಿರಸ್ಕೃತಗೊಂಡಿವೆ.

Similar News