×
Ad

ಮುಂದಿನ ಊರ ಜಾತ್ರೆಗೆ ಮುಖ್ಯಮಂತ್ರಿಯಾಗಿ ಬರ್ತಾರೆ: ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಹೇಳಿದ್ದೇನು?

Update: 2023-05-16 15:30 IST

ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಜೊತೆ ತೀವ್ರ ಪೈಪೋಟಿ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಇಂದು ಬೆಂಗಳೂರಿನ ತಮ್ಮ ನಿವಾಸದಿಂದ ದೆಹಲಿಗೆ  ಹೊರಟಿದ್ದಾರೆ. ಇನ್ನು ಸಿದ್ದರಾಮಯ್ಯರನ್ನು ಎಐಸಿಸಿ ಈಗಾಗಲೇ ದಿಲ್ಲಿಗೆ ಕರೆಸಿಕೊಂಡಿದೆ.

ಇನ್ನು ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ, 'ಮುಂದಿನ ಊರ ಜಾತ್ರೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ವೀರ ಕುಣಿತ ಮಾಡುತ್ತಾರೆ. ಅವರಂತೆ ವೀರ ಕುಣಿತ ಯಾರಿಗೂ ಬರಲ್ಲ, ಸಿದ್ದರಾಮಯ್ಯ ಹಿಡಿದ ಕೆಲಸ ಮಾಡುವವರೆಗೂ ಬಿಡುವವರಲ್ಲ, ಚಿಕ್ಕಂದಿನಿಂದಲೂ ಅವರು ಅದೇ ರೀತಿ ಇದ್ದಾರೆ' ಎಂದು ಹೇಳಿದ್ದಾರೆ. 

ಡಿ.ಕೆ ಶಿವಕುಮಾರ್ ರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  'ಡಿ.ಕೆ. ಶಿವಕುಮಾರ್ ಕೂಡ ಸಿಎಂ ಆಗಬೇಕು. ಮುಂದೆ ಅವರು ಸಿಎಂ ಆಗುತ್ತಾರೆ. ಸಿದ್ದರಾಮಯ್ಯ ಅವರೇ ಮುಂದೆ ನಿಂತು ಸಿಎಂ ಮಾಡುತ್ತಾರೆ. ಈ ಬಾರಿ ಮಾತ್ರ ಸಿದ್ದರಾಮಯ್ಯ ಅವರೇ ಆಗಲಿ' ಎಂದು ಹೇಳಿದ್ದಾರೆ. 

Similar News