×
Ad

ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್‌ ಫ್ಲೈಟ್‌ನಲ್ಲಿ ಬೀಡಿ ಸೇದಿದ ವ್ಯಕ್ತಿಯ ಬಂಧನ

Update: 2023-05-17 15:18 IST

ಹೊಸದಿಲ್ಲಿ: ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್‌ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ 56 ವರ್ಷದ ವ್ಯಕ್ತಿಯನ್ನು ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬೀಡಿ ಸೇದಿರುವ ಆರೋಪದ ಮೇಲೆ ಬಂಧಿಸಲಾಗಿದೆ.

 ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಏರ್‌ಲೈನ್ಸ್‌ನ ಡ್ಯೂಟಿ ಮ್ಯಾನೇಜರ್ KIA ಪೊಲೀಸರಿಗೆ ದೂರು ನೀಡಿದರು. ಸಹಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪ ಪ್ರಯಾಣಿಕನ ಮೇಲಿತ್ತು.

ಆರೋಪಿಯನ್ನು ರಾಜಸ್ಥಾನದ ಮಾರ್ವಾಡಿ ಪ್ರದೇಶದವನಾದ ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಕುಮಾರ್  ಅಹಮದಾಬಾದ್‌ನಲ್ಲಿ ವಿಮಾನವನ್ನು ಹತ್ತಿದ್ದನು.  ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿರುವುದನ್ನು ಏರ್‌ಲೈನ್ಸ್ ಸಿಬ್ಬಂದಿ  ಪತ್ತೆ ಹಚ್ಚಿದ್ದರು.

ವಿಮಾನದಿಂದ ಇಳಿದ  ನಂತರ ಕುಮಾರ್ ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು, ನಾನು  ಜೀವನದಲ್ಲಿ ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದೇನೆ. ನಿಯಮಗಳ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಪೊಲೀಸರಿಗೆ ಕುಮಾರ್ ಬಹಿರಂಗಪಡಿಸಿದರು.

ನಾನು ನಿಯಮಿತವಾಗಿ ರೈಲಿನಲ್ಲಿ ಪ್ರಯಾಣಿಸುತ್ತೇನೆ ಹಾಗೂ  ಶೌಚಾಲಯದೊಳಗೆ ಧೂಮಪಾನ ಮಾಡುತ್ತೇನೆ. ನಾನು ಇಲ್ಲಿಯೂ ಅದೇ ರೀತಿ ಮಾಡಬಹುದೆಂದು ಯೋಚಿಸಿ, ಬೀಡಿ ಸೇದಲು ನಿರ್ಧರಿಸಿದೆ" ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದೆ.

ಭದ್ರತಾ ತಪಾಸಣೆಯ ಸಮಯದಲ್ಲಿ ಸಿಗರೇಟುಗಳನ್ನು ಪತ್ತೆಹಚ್ಚಲು ವಿಫಲವಾಗುವುದು ಗಂಭೀರ ಲೋಪವಾಗಿದೆ ಎಂದು ಹಿರಿಯ ಪೋಲೀಸ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

Similar News