×
Ad

ರಾಜ್ಯದಲ್ಲಿ ಮಳೆ ಇಳಿಮುಖ, ಬಿಸಿಲ ಝಳ ಹೆಚ್ಚಳ

Update: 2023-05-17 20:44 IST

ಬೆಂಗಳೂರು, ಮೇ 17: ಮೋಚಾ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಬೀರಿದ್ದು, ಗುಡುಗು, ಮಿಂಚು ಬಿರುಗಾಳಿ ಸಮೇತ ಭಾರಿ ಮಳೆ ಸುರಿದಿದೆ. ಮಳೆ ಕಡಿಮೆ ಆಗುತ್ತಿದ್ದಂತೆ ಬಿಸಿಲಿನ ತಾಪವೂ ಏರತೊಡಗಿದೆ.  

ಇತ್ತೀಚೆಗೆ ಬಿದ್ದ ಅಲ್ಪ ಪ್ರಮಾಣದ ಮಳೆಯಿಂದ ವಾತಾವರಣ ತಂಪಾಗಿದ್ದು, ಮೋಚಾ ಚಂಡಮಾರುತ ಸೃಷ್ಟಿಯಾಗಿ ಬೇರೆ ದೇಶಗಳತ್ತ ಸಾಗಿದ್ದರಿಂದ ನಿರೀಕ್ಷೆಯಂತೆ ಮಳೆ ಬರಲಿಲ್ಲ. ಇದರಿಂದ, ಈಗ ತಾಪಮಾನ ಏರಿಕೆಯಾಗ ತೊಡಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ 40ರಿಂದ 42 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. 

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33ರಿಂದ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲು ಆಗುತ್ತಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41ರಿಂದ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

Similar News