×
Ad

ಮಾದಿಗ ಸಮಾಜದ ಬಗ್ಗೆ ಅವಹೇಳನ ಆರೋಪ: ಹರಿಹರ ಬಿಜೆಪಿ ಶಾಸಕನ ವಿರುದ್ದ ಪ್ರಕರಣ ದಾಖಲು

Update: 2023-05-17 21:45 IST

ಹರಿಹರ: ಮಾದಿಗ ಸಮುದಾಯದ ಬಗ್ಗೆ ಅವಹೇಳನ ವಾಗಿ ಮಾತನಾತಡಿರುವ ಆರೋಪದ ಮೇರೆಗೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ದು ಪ್ರಕರಣ ದಾಖಲಾಗಿದೆ.

ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರ ಮಂಗಳವಾರ ಮಾದಿಗ ಸಮುದಾಯದ ಬಗ್ಗೆ ಅವಹೇಳ ಮಾಡಿದ್ದಾರೆ ಅರೋಪಿಸಿ ಮಾದಿಗ ಸಮುದಾಯ ಹರಿಹರದಲ್ಲಿ ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದರು. ಶಾಸಕರು ಅವಹೇಳ ಮಾಡಿದ್ದಾರೆನ್ನಲಾದ ಶಾಸಕರ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. 

ಈ ಸಂಬಂಧ ಪ್ರತಿಭಟನಾಕಾರರು ನೀಡಿದ ದೂರಿನ ಮೇರೆಗೆ ಹರಿಹರ ಪೊಲೀಸ್ ಠಾಣೆಯಲ್ಲಿ ಶಾಕಸರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ದೂರು ಎಂದು  ಪ್ರಕರಣ ದಾಖಲಿಸಲಾಗಿದೆ.

Similar News